ಬೆಂಗಳೂರು: ಯಲಹಂಕದಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋನಲ್ಲಿ ನೂರಾರು ಕಾರುಗಳು ಸುಟ್ಟುಹೋದ ಮಹಾ ಅಗ್ನಿದುರಂತ ಘಟನೆ ಸಂಭವಿಸಿದೆ. ಬ್ಯಾನಟ್ ಬಿಟ್ಟರೆ ಕಾರುಗಳು ಗುರುತೇ ಸಿಗದಷ್ಟು ಭಸ್ಮವಾಗಿ ಹೋಗಿವೆ. ಕಾರು ಕಳೆದುಕೊಂಡವರು, ಅದಕ್ಕಿಂತಲೂ ಹೆಚ್ಚಾಗಿ ಕಾರಿನಲ್ಲಿದ್ದ ತಮ್ಮ ವೈಯಕ್ತಿಕ ಪ್ರಮುಖ ಡಾಕ್ಯುಮೆಂಟ್ಗಳನ್ನು ಕಳೆದುಕೊಂಡ ಜನರ ಗೋಳು ಹೇಳತೀರದಂತಿತ್ತು.