ನಂಜನಗೂಡು ತಾ ಗಟ್ಟವಾಡಿ ಗ್ರಾಮದಲ್ಲಿ ಮಾರಮ್ಮ ಹಬ್ಬದ ಪೂಜೆ ವಿಚಾರವಾಗಿ ಗಲಾಟೆ ನಡೆದಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಇತ್ತೀಚೆಗಷ್ಟೇ ನವೀಕರಣಗೊಂಡ ದೇವಸ್ಥಾನದ ಒಳಗೆ ತೆಂಗಿನಕಾಯಿ ಹೊಡೆಯಲು ವಿರೋಧ ವ್ಯಕ್ತಪಡಿಸಿದ ಯುವಕರ ತಲೆ ಮೇಲೆ ತೆಂಗಿನಕಾಯಿ ಹೊಡೆದು ಜಗಳ ಆರಂಭವಾಗಿದೆ. ಈ ಗಲಾಟೆ ತಾರಕ್ಕಕ್ಕೇರಿದ ಪರಿಣಾಮ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.