ಹೋಮ್ » ವಿಡಿಯೋ » ರಾಜ್ಯ

ನನ್ನನ್ನ ಇನ್ನೂ ಜೈಲಿಗೆ ಕಳಿಸಿಲ್ಲ: ಬಿಜೆಪಿ ವಿರುದ್ಧ ಡಿಕೆಶಿ ವ್ಯಂಗ್ಯ

ರಾಜ್ಯ17:40 PM May 10, 2019

ಧಾರವಾಡ: ಭ್ರಷ್ಟಾಚಾರದ ಹಣವನ್ನು ತಂದು ಡಿಕೆಶಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದು ಯಡಿಯೂರಪ್ಪ ಮಾಡಿದ ಆರೋಪಕ್ಕೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು. ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಡಿಕೆಶಿ, ತನ್ನನ್ನು ಇನ್ನೂ ಜೈಲಿಗೆ ಕಳಿಸಿಲ್ಲ. ಅದಕ್ಕೆ ಕಾಯುತ್ತಾ ಇದ್ದೀನಿ ಎಂದು ಬಿಜೆಪಿಗೆ ಪ್ರತಿಸವಾಲು ಹಾಕಿದರು. ತನ್ನ ಬಗ್ಗೆ ಏನು ಬೇಕಾದರೂ ಹೇಳಿಕೊಳ್ಳಲಿ. ನಾನು ಯಾರು, ನನ್ನ ಶಕ್ತಿ, ದೌರ್ಬಲ್ಯ ಎಲ್ಲ ನನಗೆ ತಿಳಿದಿದೆ, ಅವರಿಗೂ ಅದು ಗೊತ್ತಿದೆ ಎಂದು ಬಿಜೆಪಿಯನ್ನು ಕುಟುಕಿದರು. ಜಗದೀಶ್ ಶೆಟ್ಟರ್ ಬಗ್ಗೆ ಮಾತನಾಡಿದ ಡಿಕೆಶಿ ವೀ ಲವ್ ಈಚ್ ಅದರ್ ಎಂದು ಹಾಸ್ಯ ಮಾಡಿದರು.

sangayya

ಇತ್ತೀಚಿನದು

Top Stories

//