ಹೋಮ್ » ವಿಡಿಯೋ » ರಾಜ್ಯ

ಸೋಲಿನ ನೋವಲ್ಲಿದ್ದರೂ ದೇವೇಗೌಡರಿಗೆ ನಾಡಿನ ಚಿಂತೆ: ಟಿಬಿ ಜಯಚಂದ್ರ

ರಾಜ್ಯ18:29 PM May 25, 2019

ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಸೋಲಿನ ಆಘಾತ ಸಿಕ್ಕಿದೆ. ಈ ವೇಳೆ ಅವರಿಗೆ ಸಮಾಧಾನ ಹೇಳಲು ಹೋದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಅಚ್ಚರಿ ಕಾದಿತ್ತು. ಗೌಡರ ಜೊತೆ 3 ಗಂಟೆ ಇದ್ದರೂ ಅವರಿಗೆ ಸಮಾಧಾನ ಹೇಳುವ ಅವಕಾಶವೇ ಸಿಗಲಿಲ್ಲವಂತೆ. ಇದ್ದಷ್ಟೂ ಹೊತ್ತು ಆ ನೀರಾವರಿ, ಈ ನೀರಾವರಿ ಯೋಜನೆಗಳ ಬಗ್ಗೆಯೇ ಗೌಡರ ಮಾತುಕತೆ ನಡೆದಿತ್ತು. ನೀರಾವರಿ ವಿಚಾರ ಬಿಟ್ಟು ಗೌಡರು ಬೇರೆ ಮಾತನಾಡಲೇ ಇಲ್ಲ ಎಂದು ಸಚಿವರು ಹೇಳಿದ್ದಾರೆ. ತುಮಕೂರಿನಲ್ಲಿ ದೇವೇಗೌಡರು ಸೋಲುತ್ತಾರೆಂದು ತಾವು ನಿರೀಕ್ಷಿಸಿರಲಿಲ್ಲ. ಅವರು ಸೋತಿದ್ದು ಅತೀವ ಬೇಸರ ತರಿಸಿದೆ. ಅವರಂತಹ ರಾಜಕೀಯ ಮುತ್ಸದ್ಧಿತನ, ಅನುಭವವು ನೀರಾವರಿ ಕ್ಷೇತ್ರದಲ್ಲಿ ಒಂದು ಶಕ್ತಿಯಾಗಿತ್ತು ಎಂದು ಟಿ.ಬಿ. ಜಯಚಂದ್ರ ಅವರು ತಿಳಿಸಿದ್ಧಾರೆ.

sangayya

ಇತ್ತೀಚಿನದು

Top Stories

//