ಹೋಮ್ » ವಿಡಿಯೋ » ರಾಜ್ಯ

ಸಾಮಾನ್ಯ ವ್ಯಕ್ತಿಯಾಗಿದ್ದುಕೊಂಡೇ ಜನಸೇವೆ ಮಾಡುತ್ತೇನೆ: ಭವಿಷ್ಯದ ಬಗ್ಗೆ ಅಣ್ಣಾಮಲೈ ಚಿಂತನೆ

ರಾಜ್ಯ17:10 PM May 28, 2019

ಬೆಂಗಳೂರು: ಇವತ್ತು ರಾಜೀನಾಮೆ ನೀಡಿದ ತಮಿಳುನಾಡು ಮೂಲದ ಐಪಿಎಸ್ ಅಧಿಕಾರಿ ಡಿಸಿಪಿ ಅಣ್ಣಾಮಲೈ ಅವರು ಕರ್ನಾಟಕದ ಜನತೆಯನ್ನು ಪ್ರಶಂಸಿಸಿದ್ದಾರೆ. ಎರಡು ಬ್ಯಾಗ್ ಇಟ್ಟುಕೊಂಡು ಉಡುಪಿಗೆ ಬಂದಿಳಿದ ನಾನು ಈ ಮಟ್ಟಕ್ಕೆ ಬೆಳೆಯಲು ಕರ್ನಾಟಕದ ಜನರೇ ಕಾರಣ ಎಂದು ಹೇಳಿದ ಅಣ್ಣಾಮಲೈ, ಇಲ್ಲಿಯ ಜನರಂತೆ ರಾಜಕಾರಣಿಗಳೂ ಕೂಡ ಸಭ್ಯರಿದ್ದಾರೆ. ಯಾರೂ ಕೂಡ ತನಗೆ ತೊಂದರೆ ಕೊಟ್ಟಿಲ್ಲ. ಈಗಿನ ಸಿಎಂ ಕುಮಾರಸ್ವಾಮಿ ಅವರಂತೂ ಪೂರ್ಣ ಫ್ರೀ ಹ್ಯಾಂಡ್ ಕೊಟ್ಟಿದ್ಧಾರೆ. ಒಂದು ದಿನವೂ ಯಾತಕ್ಕೂ ಅವರು ಫೋನ್ ಮಾಡಿದವರಲ್ಲ. ಹಿಂದಿನ ಸಿಎಂ ಸಿದ್ದರಾಮಯ್ಯ ಕೂಡ ಒತ್ತಡ ಹಾಕಿದವರಲ್ಲ. ನಾನೊಬ್ಬ ಕನ್ನಡಿಗನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories

//