ಚಿಕ್ಕಮಗಳೂರು: ತೆಂಗಿನ ಮರಕ್ಕೆ ವಿದ್ಯುತ್ ತಂತಿ ತಗುಲಿ ನೋಡ-ನೋಡ್ತಿದ್ದಂತೆ ತೆಂಗಿನ ಮರ ಹೊತ್ತಿ ಉರಿದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಅಬ್ಬಿಗದ್ದೆ ಗ್ರಾಮದಲ್ಲಿ ನಡೆದಿದೆ. ಅಬ್ಬಿಗದ್ದೆಯ ಪ್ರಾಥಮಿಕ ಶಾಲೆ ಮುಂಭಾಗದಲ್ಲಿದ್ದ ತೆಂಗಿನಮರಕ್ಕೆ ಮರದ ಪಕ್ಕದಲ್ಲೇ ಹಾದುಹೋಗಿರೋ 11 ಕಿ.ವಿ. ಲೈನ್ ತಂತಿಯಿಂದ ಈ ಘಟನೆ ನಡೆದಿದೆ. ಕೊಪ್ಪದಲ್ಲಿ ಅಷ್ಟಾಗಿ ಮಳೆ ಇಲ್ಲ. ಜೋರಾಗಿ ಬೀಸ್ತಿದ್ದ ಗಾಳಿಯಿಂದ ವಿದ್ಯುತ್ ತಂತಿ ತೆಂಗಿನಮರಕ್ಕೆ ಸ್ಪರ್ಶಿಸಿ ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ನೋಡನೋಡ್ತಿದ್ದಂತೆ ಬೆಂಕಿ ತನ್ನ ವೇಗವನ್ನ ಹೆಚ್ಚಿಸಿಕೊಂಡು, ಮರವನ್ನ ಸಂಪೂರ್ಣ ಆವರಿಸಿಕೊಂಡಿದೆ. ಮರ ಹೊತ್ತಿ ಉರಿಯೋ ದೃಶ್ಯವನ್ನ ಸ್ಥಳಿಯರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಕೂಡಲೇ ಮೆಸ್ಕಾಂಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಮೆಸ್ಕಾಂ ಸಿಬ್ಬಂದಿಗಳು ತೆಂಗಿನ ಮರಕ್ಕೆ ತಗುಲಿದ್ದ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Shyam.Bapat
Share Video

Featured videos
up next
ಕಾಂಗ್ರೆಸ್ನಿಂದ ಮತ್ತೊಂದು ಗ್ಯಾರಂಟಿ ಯೋಜನೆ; ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ಭತ್ಯೆ!