ಹೋಮ್ » ವಿಡಿಯೋ » ರಾಜ್ಯ

ಮಂಡ್ಯ ಚುನಾವಣೆಗೆ 150 ಕೋಟಿ ರೂ ಖರ್ಚು ಮಾಡಿರುವುದಕ್ಕೆ ದಾಖಲೆ ತೋರಿಸಲಿ: ಕುಮಾರಸ್ವಾಮಿ ಸವಾಲು

ರಾಜ್ಯ05:32 PM IST Apr 19, 2019

ಹುಬ್ಬಳ್ಳಿ: ಮಂಡ್ಯ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು 150 ಕೋಟಿ ರೂ ಖರ್ಚು ಮಾಡಲಾಗಿದೆ ಎಂಬ ಆರೋಪಕ್ಕೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದರು. ತಾನು ಇಷ್ಟೊಂದು ಹಣ ಖರ್ಚು ಮಾಡಿರುವುದಕ್ಕೆ ಪುರಾವೆ ಇದೆಯಾ? ಹಾಗೇನಾದರೂ ಇದ್ದಿದ್ದರೆ ಐಟಿಯವರು ಸುಮ್ಮನೆ ಇರುತ್ತಿದ್ದರಾ? ಮಂಡ್ಯದಲ್ಲಿ ಐಟಿ ದಾಳಿಯಾದಾಗ ಒಂದು ಬಿಡಿಗಾಸೂ ಸಿಗಲಿಲ್ಲ. ಯಾರೋ ಮಾಡುವ ಆರೋಪಕ್ಕೆ ನಾನ್ಯಾಕೆ ಉತ್ತರ ಕೊಡಲಿ ಎಂದು ಪತ್ರಕರ್ತರಿಗೆ ಕುಮಾರಸ್ವಾಮಿ ತಿಳಿಸಿದರು. ಇನ್ನೂ ಮುಂದುವರಿದ ಕುಮಾರಸ್ವಾಮಿ, ಇದೇನೂ ಚರ್ಚೆ ಮಾಡುವ ವಿಷಯವಾ? ಯಡಿಯೂರಪ್ಪ ತನ್ನ ಮಗನನ್ನು ಗೆಲ್ಲಿಸಿಕೊಂಡು ಬರಲು ಹೊರಟಿರುವುದು ಯಾರ ಅಪ್ಪನ ಮನೆಯ ದುಡ್ಡು ಎಂದೂ ಪ್ರಶ್ನಿಸಿದರು.

sangayya

ಇತ್ತೀಚಿನದು Live TV