ಒನ್ವೇಯಲ್ಲಿ ಬರ್ತಿದ್ದ ಪ್ರವಾಸಿ ವಾಹನವನ್ನು ತಡೆಯಲು ಮುಂದಾದ ಕರ್ತವ್ಯ ನಿರತ ಹೋಮ್ ಗಾರ್ಡ್ಗೆ ಅಪಘಾತ ಪಡಿಸಿ ಕಾರಿನಲ್ಲಿಯೇ ಮಾರು ದೂರ ಹೊತ್ತೊಯ್ದು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಗೋಕರ್ಣದ ಕಡಲತೀರದ ರಸ್ತೆಯಲ್ಲಿ ನಡೆದಿದೆ. ಗೋಕರ್ಣಕ್ಕೆ ಭೇಟಿ ನೀಡಿದ್ದ ಪ್ರವಾಸಿಗರು ತಮ್ಮ ವಾಹನದಲ್ಲಿ ತೆರಳುವಾಗ ಸಂಚಾರಿ ನಿಯಮ ಉಲ್ಲಂಘಿಸಿ ಹೋಗುತಿದ್ದಾಗ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಹೋಮ್ ಗಾರ್ಡ್ ಚಿದಾನಂದ್ ಎಂಬುವವರು ವಾಹನವನ್ನು ತಡೆಯಲು ಮುಂದಾಗಿದ್ದಾರೆ. ಈ ವೇಳೆ ಆತನಿಂದ ತಪ್ಪಿಸಿಕೊಳ್ಳಲು ಪ್ರವಾಸಿ ವಾಹನದ ಚಾಲಕ ಆತನ ಮೇಲೆ ಕಾರನ್ನು ಹರಿಸಲು ಮುಂದಾಗಿದ್ದಾನೆ.