ಹೋಮ್ » ವಿಡಿಯೋ » ರಾಜ್ಯ

ಅಸ್ಸಾಮ್​ನಲ್ಲಿ ಪಿಕ್ನಿಕ್ ಖುಷಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಗುಂಪಿನ ಮೇಲೆ ಹರಿದಿತ್ತು ಬಸ್ಸು

ರಾಜ್ಯ16:13 PM January 29, 2018

ಗುವಾಹತಿ(ಜ. 29): ಪಿಕ್ನಿಕ್ ಸ್ಪಾಟ್ನಲ್ಲಿ ಡ್ಯಾನ್ಸ್ ಮಾಡುತ್ತಾ ಖುಷಿ ಖುಷಿಯಲ್ಲಿದ್ದ ಗುಂಪಿಗೆ ನಿನ್ನೆ ಭಯಾನಕ ಘಟನೆ ಎದುರಾಯಿತು. ಡ್ಯಾನ್ಸ್ ಮಾಡುತ್ತಿದ್ದ ಗುಂಪಿನ ಮೇಲೆ ದಿಢೀರನೇ ಬಸ್ಸೊಂದು ಹತ್ತಿಹರಿದು ಇಬ್ಬರು ಮಂದಿ ದಾರುಣ ಸಾವನ್ನಪ್ಪಿದ್ದಾರೆ. ಅಸ್ಸಾಮ್ನ ಕಾರ್ಬಿ ಆಂಗ್ಲೋಂಗ್ ಜಿಲ್ಲೆಯಲ್ಲಿ ನಿನ್ನೆ ಈ ಘಟನೆ ಸಂಭವಿಸಿದೆ. ಒಬ್ಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದರೆ, ಒಬ್ಬ ಹುಡುಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ. ಇನ್ನೂ ಹಲವಾರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತ ಮಾಡಿದ ಬಸ್ಸಿನ ಚಾಲಕ ಕುಡಿತದ ನಶೆಯಲ್ಲಿದ್ದನೆನ್ನಲಾಗಿದೆ.

webtech_news18

ಇತ್ತೀಚಿನದು Live TV