ಬಳ್ಳಾರಿ (ಜ. 3): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಹೋರಾಟ ಮಾಡಿದ ಎಲ್ಲರನ್ನೂ ಶೂಟ್ ಮಾಡಿದ್ದರೆ ಅನುಕೂಲ ಆಗಿರೋದು. ದೇಶದ ಜನಸಂಖ್ಯೆಯಾದರೂ ಕಡಿಮೆಯಾಗುತ್ತಿತ್ತು. ನೀವು ನಮ್ಮ ದೇಶದಲ್ಲಿ ಇರಬೇಕು ಅಂದ್ರೆ ನಾವು ಹೇಳಿದ ಹಾಗೆ ಕೇಳಬೇಕು ಎನ್ನುವ ಮೂಲಕ ಶಾಸಕ ಸೋಮಶೇಖರ ರೆಡ್ಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.