ಹೋಮ್ » ವಿಡಿಯೋ » ರಾಜ್ಯ

ರಮೇಶ್ ಆತ್ಮಹತ್ಯೆಗೆ ಹೊಸ ತಿರುವು

ರಾಜ್ಯ19:34 PM October 12, 2019

ಐಟಿ ಅಧಿಕಾರಿಗಳ ಕಿರುಕುಳಕ್ಕೆ ಹೆದರಿ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮೇಶ್ ಸಾವಿಗೆ ಐಟಿ ಅಧಿಕಾರಿಗಳೇ ಕಾರಣ ಎಂದು ಕಾಂಗ್ರೆಸ್​ ನಾಯಕರು ಆರೋಪ ಮಾಡಿದ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಐಟಿ ಇಲಾಖೆ, ನಮ್ಮ ತಂಡ ರಮೇಶ್​ ಅವರ ಮನೆಯನ್ನು ತಪಾಸಣೆ ಮಾಡಿಯೇ ಇಲ್ಲ ಹಾಗೂ ಅವರಿಂದ ಯಾವುದೇ ಹೇಳಿಕೆಯನ್ನೂ ಪಡೆದಿಲ್ಲ ಎಂದು ಹೇಳಿಕೆ ನೀಡಿತ್ತು. ಆದರೆ, ರಮೇಶ್ ಮನೆಗೆ ಐಟಿ ಅಧಿಕಾರಿಗಳು ತೆರಳಿ, ಪರಿಶೀಲನೆ ನಡೆಸಿದ್ದರು ಎಂಬುದಕ್ಕೆ ಸಿಸಿಟಿವಿ ದೃಶ್ಯಾವಳಿಗಳು ಸಾಕ್ಷಿಯಾಗಿವೆ. ಐಟಿ ಅಧಿಕಾರಿಗಳು ರಮೇಶ್ ಮನೆಗೆ ಬಂದಿದ್ದ ದೃಶ್ಯಾವಳಿಗಳು ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿವೆ. ರಮೇಶ್ ಮನೆಗೆ ಐಟಿ ಅಧಿಕಾರಿಗಳು ತೆರಳಿ ತಪಾಸಣೆ ನಡೆಸಿದ್ದರೂ, ನಾವು ರಮೇಶ್ ಮನೆಗೆ ಹೋಗಿಯೇ ಇಲ್ಲ ಎಂದು ಐಟಿ ಇಲಾಖೆ ಸ್ಪಷ್ಟನೆ ನೀಡಿರುವುದು ಇದೀಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

sangayya

ಇತ್ತೀಚಿನದು

Top Stories

//