ಹೋಮ್ » ವಿಡಿಯೋ » ರಾಜ್ಯ

ಕಳ್ಳರಿಗೆ ಬಂಡವಾಳವಾದ ಭಾರತ ಬಂದ್​; ಬರೋಬ್ಬರಿ 7 ಲಕ್ಷ ಹಣ ಕಳವು

ರಾಜ್ಯ04:16 PM IST Jan 09, 2019

'ಭಾರತ ಬಂದ್'​ನ್ನು ಬಂಡವಾಳ ಮಾಡಿಕೊಂಡ ಕಳ್ಳರು ಹುಬ್ಬಳ್ಳಿಯಲ್ಲಿ ಒಂದೇ ದಿನ ಬರೋಬ್ಬರಿ 16 ಅಂಗಡಿಗಳಿಗೆ ಕನ್ನ ಹಾಕಿ ಸುಮಾರು 7 ಲಕ್ಷಕ್ಕೂ ಹೆಚ್ಚು ಹಣ ಕದ್ದಿದ್ದಾರೆ. ನಗರದ ಅಮರಗೋಳ ಎಪಿಎಂಸಿಯಲ್ಲಿ ಕಳ್ಳತನವಾಗಿದೆ. ಕಳ್ಳರು ರಾಡ್​ನಿಂದ ಡ್ರಾಯರ್​ಗಳನ್ನು ಒಡೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎಪಿಎಂಸಿ ವರ್ತಕರು ಹಾಗೂ ವ್ಯಾಪಾರಸ್ಥರು ನಿನ್ನೆ ಬಂದ್‌ಗೆ ಬೆಂಬಲ ನೀಡಿದ್ದರು. ನಿನ್ನೆ ಅಂಗಡಿಗಳು ಬಂದಾಗಿದ್ದನ್ನು ನೋಡಿ ಖದೀಮರು ಕನ್ನ ಹಾಕಿದ್ದಾರೆ. ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

sangayya

ಇತ್ತೀಚಿನದು Live TV