ಮುಖ್ಯಮಂತ್ರಿ ವಾಮಮಾರ್ಗದಿಂದ ಸರ್ಕಾರ ಉಳಿಸಿಕೊಳ್ಳೋಕೆ ಯತ್ನ ಮಾಡ್ತಿದ್ದಾರೆ. 19 ಕ್ಕೆ ವಿಚಾರಣೆಗೆ ಹಾಜರಾಗೋಕೆ ಮೊದಲೇ ರೋಷನ್ ಬೇಗ್ ರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಬೇಗ್ ರನ್ನು ವಶಕ್ಕೆ ಪಡೆಯುವ ಅವಶ್ಯಕತೆ ಏನಿತ್ತು. ನೋಟೀಸ್ ಕೊಟ್ಟು ವಿಚಾರಣೆಗೆ ನಮ್ಮ ವಿರೋಧ ಇಲ್ಲ. ಅವರೇನು ದೇಶ ಬಿಟ್ಟು ಹೋಗ್ತಾರಾ? ಅವರ ವೈಯಕ್ತಿಕ ಕಾರಣಕ್ಕೆ ಹೋಗ್ತಿದ್ರು. ಅವರ ಹುಟ್ಟುಹಬ್ಬ ಇತ್ತು ಅದಕ್ಕೆ ಹೋಗ್ತಿದ್ರು. ಅಂತ ಸಂದರ್ಭದಲ್ಲಿ ಶಾಸಕರ ವಶಕ್ಕೆ ಸ್ಪೀಕರ್ ಅನುಮತಿ ತಗೋಬೇಕಾಗುತ್ತೆ. ಶಾಸಕರ ಹಕ್ಕುಗಳನ್ನು ಕಸಿಯುವ ಕೆಲಸ ಈ ಸರ್ಕಾರ ಮಾಡ್ತಿದೆ. ಅವ್ರನ್ನು ವಶಕ್ಕೆ ಪಡೆಯುವುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ನಾವೆಲ್ಲ ನೈತಿಕವಾಗಿ ಅವ್ರ ಬೆನ್ನಿಗೆ ನಿಲ್ತೇವೆ. ಎಸ್ ಐಟಿ ವಿಚಾರಣೆಗೆ ನಮ್ಮ ಅಭ್ಯಂತರವಿಲ್ಲ. ಎಸ್ ಐಟಿ ಇಟ್ಕೊಂಡು ಶಾಸಕರನ್ನು ಬೆದರಿಸುವ ಕೆಲಸ ಮಾಡ್ತಿದೆ. ನಿಮ್ಮ ರಾಜಕೀಯ ಕಾರ್ಯದರ್ಶಿ ಎಲ್ಲಿ ಹೋಗಿದ್ದಾರೆ ನಮಗೆ ಗೊತ್ತಿದೆ ಬಿಜೆಪಿ ಮುಖಂಡ ನಡಹಳ್ಳಿ ಸಿಎಂ ಎಚ್ಡಿಕೆ ವಿರುದ್ಧ ಕಿಡಿಕಾರಿದ್ದಾರೆ.