ಹೋಮ್ » ವಿಡಿಯೋ » ರಾಜ್ಯ

ಭದ್ರತಾ ಸಿಬ್ಬಂದಿಗೆ ಆಟೋ ಡಿಕ್ಕಿ: ಗಾಯಾಳು ಆಸ್ಪತ್ರೆಗೆ ದಾಖಲು

ರಾಜ್ಯ22:47 PM March 13, 2019

ಹುಬ್ಬಳ್ಳಿ: ಭದ್ರತಾ ಸಿಬ್ಬಂದಿಗೆ ಡಿಕ್ಕಿ ಹೊಡೆದು ಆಟೋ ಪರಾರಿಯಾಗಿರುವ ಘಟನೆ ಹುಬ್ಬಳ್ಳಿ- ಧಾರವಾಡ ನಡುವಿನ ಬಿಆರ್‌ಟಿಎಸ್ ಮಾರ್ಗದಲ್ಲಿ ನಡೆದಿದೆ. ರಾಯಾಪುರದ ಸಂಜೀವಿನಿ ಪಾರ್ಕ್‌ ಬಿಆರ್‌ಟಿಎಸ್ ಬಸ್ ನಿಲ್ದಾಣದ ಬಳಿ ಡಿಕ್ಕಿ‌ಸಂಭವಿಸಿದೆ. ಬ್ಯಾರಿಕೇಡ್ ಅಳವಡಿಸುತ್ತಿದ್ದ ಭದ್ರತಾ ಸಿಬ್ಬಂದಿಗೆ ವೇಗವಾಗಿ ಬಂದು ಆಟೋ ಡಿಕ್ಕಿ ಹೊಡೆಸಿರುವ ಚಾಲಕ ಆಟೋದೊಂದಿಗೆ ಪರಾರಿಯಾಗಿದ್ದಾನೆ. ಭದ್ರತಾ ಸಿಬ್ಬಂಧಿ ಡಿಕ್ಕಿಯ ರಭಸಕ್ಕೆ ಹಾರಿ ದೂರದಲ್ಲಿ ಬಿದ್ದಿದ್ದು, ಸಂಪೂರ್ಣ ದೃಶ್ಯ ಬಿಆರ್‌ಟಿಎಸ್ ಬಸ್ ನಿಲ್ದಾದಣದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಗಾಯಾಳು ಭದ್ರತಾ ಸಿಬ್ಬಂಧಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಡಳಿತ ಬಿಆರ್‌ಟಿಎಸ್ ಮಾರ್ಗದಲ್ಲಿ ಖಾಸಗಿ ವಾಹನ ಸಂಚಾರ ನಿಷೇಧಿಸಿದೆ. ಜಿಲ್ಲಾಡಳಿತದ ಆದೇಶ ಉಲ್ಲಂಘಿಸುವ ಆಟೋಗಳು ಬೇಕಾಬಿಟ್ಟಿಯಾಗಿ ರಸ್ತೆಗೆ ನುಗ್ಗುತ್ತಿವೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆಟೋ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.

Shyam.Bapat

ಇತ್ತೀಚಿನದು

Top Stories

//