ಹೋಮ್ » ವಿಡಿಯೋ » ರಾಜ್ಯ

ಚಾಲಕನ‌ ನಿಯಂತ್ರಣತಪ್ಪಿ ಮಸೀದಿಯ ಆವರಣಗೋಡೆಯೊಳಗೆ ನುಗ್ಗಿದ ಕಾರು:ಸಿಸಿಟಿವಿಯಲ್ಲಿ ದೃಶ್ಯ ಸೆರೆ

ರಾಜ್ಯ18:53 PM October 22, 2019

ಮಂಗಳೂರು:ಕಾರು ಚಾಲಕನ‌ ನಿಯಂತ್ರಣ ತಪ್ಪಿ ಮಸೀದಿಯ ಆವರಣಗೋಡೆಯೊಳಗೆ ನುಗ್ಗಿದ ಪರಿಣಾಮ ಚಾಲಕ ಸೇರಿ ಒಟ್ಟು ಐವರು ಗಾಯಗೊಂಡ ಘಟನೆ.ದಕ್ಷಿಣ ಕನ್ನಡ ಜಿಲ್ಲೆಯ ಫರಂಗಿಪೇಟೆ ಸಮೀಪದ ನಡೆದಿದೆ.ಇಸ್ಮಾಯಿಲ್, ಸುಲೈಮಾನ್ ಗಾಯಗೊಂಡವರೆಂದು ತಿಳಿದುಬಂದಿದ್ದು, ಕಾರಿನಲ್ಲಿದ್ದ ಮೂವರ ಪ್ರಯಾಣಿಕರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸಾದ್ ನೇತ್ರಾಲಯಕ್ಕೆ ಸೇರಿದ ಓಮ್ನಿ ಕಾರು ಬಿ.ಸಿ.ರೋಡ್ ನಿಂದ ಮಂಗಳೂರು ಕಡೆಗೆ ತೆರಳುತ್ತಿರುವಾಗ ಘಟನೆ ನಡೆದಿದ್ದು, ಪರಿಣಾಮವಾಗಿ ಹೆದ್ದಾರಿ ಪಕ್ಕದಲ್ಲಿರುವ ತ್ವಾಹಾ ಜುಮಾ ಮಸೀದಿಯ ಆವರಣಗೋಡೆಯಾಗಿ ಏರಿ ನಿಂತಿದೆ. ಈ ವೇಳೆ ಮಸೀದಿ ಆವರಣದಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದ್ದು, ಮಸೀದಿಗೆ ಹಾನಿಯಾಗಿದೆ.ಅಪಘಾತ ದೃಶ್ಯ ಮಸೀದಿಯ‌ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸ್ಥಳಕ್ಕೆ ಬಂಟ್ವಾಳ ಪೊಲೀಸರು ತೆರಳಿ ಪ್ರಕರಣ ದಾಖಲಿಸಿದ್ದಾರೆ.

Shyam.Bapat

ಇತ್ತೀಚಿನದು Live TV
corona virus btn
corona virus btn
Loading