ಹೋಮ್ » ವಿಡಿಯೋ » ರಾಜ್ಯ

ದಸರಾ ಮುಗಿಸಿ ಹೊರಟ ಆನೆಗಳಿಗೆ ಭಾವಪೂರ್ಣ ವಿದಾಯ

ರಾಜ್ಯ15:46 PM October 10, 2019

ಮೈಸೂರಿನಲ್ಲಿ ಇಂದು ದಸರಾ ಗಜಪಡೆಗೆ ಸಾಂಪ್ರದಾಯಿಕ ವಿದಾಯ ಹೇಳಲಾಗಿದೆ. ಅರ್ಜುನ ಮತ್ತು ತಂಡದ ಆನೆಗಳು ನಾಡಿನಿಂದ ಕಾಡಿನತ್ತ ಪ್ರಯಾಣ ಬೆಳೆಸಿವೆ. ಮೈಸೂರು ಅರಮನೆ ಆವರಣದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡುಗೆ ನೀಡಲಾಗಿದೆ. ಈ ವೇಳೆ ಯಾವ ಅಧಿಕಾರಿಗಳೂ, ಜನಪ್ರತಿನಿಧಿಗಳೂ ಹಾಜರಿರಲಿಲ್ಲ. ಗಜಪಯಣ ಕಾರ್ಯಕ್ರಮದಲ್ಲಿ ಎರಡೆರಡು ಬಾರಿ ಪೂಜೆ ಪುಷ್ಪಾರ್ಚನೆ ಮಾಡಿದ್ದ ಜನಪ್ರತಿನಿಧಿಗಳು‌ ದಸರಾ ಮುಗಿದ ಮರುದಿನವೇ ಆನೆಗಳನ್ನ ಮರೆತಿದ್ದಾರೆ. ಲಾರಿಯಲ್ಲಿ ಹೊರಟ ಆನೆಗಳಿಗೆ ಮೈಸೂರು ಜನರು ಕೈಬೀಸಿ ಭಾವಪೂರ್ಣ ವಿದಾಯ ಸಲ್ಲಿಸಿದ್ದಾರೆ.

sangayya

ಇತ್ತೀಚಿನದು

Top Stories

//