ಹೋಮ್ » ವಿಡಿಯೋ

ಹಾವನ್ನು ಕೋಳಿ ನುಂಗಿತ್ತಾ...! : ವಿಡಿಯೋ ವೈರಲ್​

ವಿಡಿಯೋ19:29 PM December 04, 2018

ಕೋಳಿಯೊಂದು ವಿಷ ಸರ್ಪವನ್ನು ಜೀವಂತವಾಗಿ ನುಂಗಿದ ಘಟನೆ ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ನಡೆದಿದೆ. ಅಂಗಳದಲ್ಲಿ ಕಾಳು ತಿನ್ನುತ್ತಿದ್ದಾಗ ಕೋಳಿಯ ಎದುರಿಗೆ ಹಾವಿನ ಮರಿಯೊಂದು ಪ್ರತ್ಯಕ್ಷಗೊಂಡಿದೆ. ತಕ್ಷಣ ಹಾವಿನ ತಲೆಯನ್ನು ಕುಕ್ಕಿ ಗಲಿಬಿಲಿಗೊಳ್ಳುವಂತೆ ಮಾಡಿದ ಕೋಳಿ ನಿಧಾನವಾಗಿ ತಿನ್ನಲಾರಂಭಿಸಿದೆ. ಕೆಲ ಸೆಕೆಂಡುಗಳಲ್ಲಿಯೇ ಕೋಳಿ ಹಾವನ್ನು ಸ್ವಾಹಾ ಮಾಡಿದೆ. ಕೋಳಿ ಹಾವನ್ನು ನುಂಗುವ ದೃಶ್ಯಗಳನ್ನು ಜನತೆ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಹಾವು ಕೋಳಿ ಮತ್ತು ಅದರ ಮೊಟ್ಟೆಯನ್ನು ನುಂಗೋದು ಸಾಮಾನ್ಯ. ಆದರೆ ಕೋಳಿಯೇ ಹಾವನ್ನು ನುಂಗಿ ಹಾಕಿರುವುದು ಅಚ್ಚರಿಗೆ ಕಾರಣವಾಗಿದೆ. ವಿಷ ಹಾವನ್ನು ನುಂಗಿದ ನಂತರವೂ ಕೋಳಿ ಜೀವಂತವಾಗಿದೆ.

Shyam.Bapat

ಇತ್ತೀಚಿನದು

Top Stories

//