ರಸ್ತೆಯಲ್ಲಿ ಹಂದಿಯೊಂದು ಅಡ್ಡ ಬಂದ ಕಾರಣ ಟಂಟಂ ಪಲ್ಟಿಯಾಗಿ ವ್ಯಕ್ತಿಯೋರ್ವ ಸಾವಿಗೀಡಾದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ.ನಿಡಗುಂದಿ ಪಟ್ಟಣದ ಬಸ್ ನಿಲ್ದಾಣದ ಬಲಿ ಟಂಟಂ ಸಂಚರಿಸುತ್ತಿತ್ತು. ಆಗ ರಸ್ತೆಯ ಮಧ್ಯೆ ಹಂದಿ ಅಡ್ಡ ಬಂದಿದೆ. ಚಾಲಕ ಬ್ರೇಕ್ ಹಾಕಿದ ಪರಿಣಾಮ ಟಂಟಂ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಟಂಟಂ ನಲ್ಲಿದ್ದ ಭೀಮಪ್ಪ ಮಣ್ಣಿಕೇರಿ(48) ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಭೀಮಪ್ಪ ಮಣ್ಣಿಕೇರಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕಾಶಿನಕುಂಟೆ ಗ್ರಾಮದವರಾಗಿದ್ದಾರೆ.
ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.