ಹೋಮ್ » ವಿಡಿಯೋ

ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಮತ್ತು ಲಾರಿ ಚಾಲಕರ ಪರಸ್ಪರ ಹೊಡೆದಾಟ

ವಿಡಿಯೋ16:08 PM December 09, 2018

ಸಾರಿಗೆ ಸಂಸ್ಥೆಯ ಬಸ್ ಚಾಲಕ ಮತ್ತು ಲಾರಿ ಚಾಲಕ ಪರಸ್ಪರ ಹೊಡೆದಾಡಿದ ಘಟನೆ ಹುಬ್ಬಳ್ಳಿಯ ಇಟ್ಟಿಗಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಓವರ್‌ಟೇಕ್ ಮಾಡುವ ವಿಷಯಕ್ಕೆ ಸಂಭಂದಪಟ್ಟಂತೆ ಚಾಲಕರಿಬ್ಬರೂ ರಸ್ತೆ ನಡುವೆ ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದಾರೆ. ಚಾಲಕರ ಗಲಾಟೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಕೆಲಹೊತ್ತು ಟ್ರಾಫಿಕ್‌ಜಾಮ್ ಉಂಟಾಗಿತ್ತು. ಬೆಳಗಾವಿಯಿಂದ ಹುಬ್ಬಳ್ಳಿಕಡೆಗೆ ಬರುತ್ತಿದ್ದ ಲಾರಿಯನ್ನು ಓವರ್ಟೇಕ್ ಮಾಡಲು ಬಸ್‌ ಚಾಲಕ ಪ್ರಯತ್ನಿಸಿದ್ದ. ಆದರೆ ಲಾರಿ ಚಾಲಕ ಅಡ್ಡಾದಿಡ್ಡಿಯಾಗಿ ಲಾರಿ ಓಡಿಸುತ್ತಿದ್ದ ಎನ್ನಲಾಗಿದೆ. ಹೀಗಾಗಿ ಕೋಪಗೊಂಡ ಬಸ್ ಚಾಲಕ, ಲಾರಿ ಚಾಲಕನ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಇಬ್ಬರೂ ರಸ್ತೆ ನಡುವೆಯೇ ವಾಹನಗಳನ್ನು ನಿಲ್ಲಿಸಿ ಕೈ ಕೈ ಮಿಲಾಯಿಸಿದ್ದಾರೆ. ಚಾಲಕರ ಮಾರಾಮಾರಿ ಕಂಡ ಪ್ರಯಾಣಿಕರು ಮಧ್ಯ ಪ್ರವೇಶಿಸಿ ಸಮಾಧಾನ ಪಡಿಸಿದ್ದಾರೆ.

Shyam.Bapat

ಇತ್ತೀಚಿನದು Live TV

Top Stories

//