ಹೋಮ್ » ವಿಡಿಯೋ » ದೇಶ-ವಿದೇಶ

HistoryTV18ನಲ್ಲಿ ಜ. 22, ರಾತ್ರಿ 9ಕ್ಕೆ ಸರ್ಜಿಕಲ್ ಸ್ಟ್ರೈಕ್​ನ ರೋಚಕ ಕಾರ್ಯಕ್ರಮ

ದೇಶ-ವಿದೇಶ17:30 PM January 19, 2018

2016ರ ಸೆಪ್ಟಂಬರ್, 29. ಭಾರತೀಯರು ಎದೆಯುಬ್ಬಿಸಿ ಸಂತಸಪಡುವ ದಿನ. ಪಾಕಿಸ್ತಾನದೊಳಗೆ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಮಹತ್ವದ ಘಳಿಗೆ. ಭಾರತದ ವಿಶೇಷ ಸೇನಾ ಪಡೆಗಳು ಪಾಕ್ ಆಕ್ರಮಿತ ಕಾಶ್ಮೀರದ ಗಡಿನಿಯಂತ್ರಣ ರೇಖೆಯೊಳಗೆ ನುಗ್ಗಿ ಉಗ್ರರ ಕೆಲ ಅಡಗುದಾಣಗಳನ್ನು ಅಂದು ಧ್ವಂಸ ಮಾಡಿದವು. ಭಾರತದ ಮೇಲೆ ದಾಳಿ ಮಾಡಲು ಬಳಕೆಯಾಗುತ್ತಿದ್ದ ಈ ಉಗ್ರರ ಅಡ್ಡೆಗಳು ವೀರ ಭಾರತೀಯ ಸೈನಿಕರ ಕರಾರುವಾಕ್ ದಾಳಿಗೆ ನಾಶವಾಗಿ ಹೋದವು. ಭಾರತೀಯ ಸೈನಿಕರ ಸರ್ಜಿಕಲ್ ದಾಳಿಗೆ ಮುಂಚೆ ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ನಲ್ಲಿರುವ ಭಾರತೀಯ ಸೇನಾ ನೆಲೆಯ ಮೇಲೆ ಉಗ್ರರು ದಾಳಿ ನಡೆಸಿ 19 ಯೋಧರನ್ನು ಬಲಿತೆಗೆದುಕೊಂಡಿದ್ದರು. ಆ ದಾಳಿಯಲ್ಲಿ ಪಾಕಿಸ್ತಾನದ ಜೇಷೇ ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡ ಇತ್ತು. ಈ ಉಗ್ರರ ದಾಳಿಯನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವೇ ಇರಲಿಲ್ಲ. ದಾಳಿಗೆ ತಕ್ಕ ಪ್ರತಿದಾಳಿ ಆಗಲೇಬೇಕಿತ್ತು. ಭಾರತೀಯ ಸೇನಾಧಿಕಾರಿಗಳು ಎಲ್ಲಾ ರೀತಿಯ ಪ್ರತ್ಯುತ್ತರಗಳಿಗೆ ಯೋಜನೆ ರೂಪಿಸಿದರು. ಕೊನೆಗೆ, ವೈರಿ ಊಹಿಸಿಕೊಳ್ಳಲಾಗದ ರೀತಿಯಲ್ಲಿ ಅವನದೇ ನೆಲಕ್ಕೆ ನುಗ್ಗಿ ದಾಳಿ ನಡೆಸಲು ಅಂತಿಮವಾಗಿ ಡಿಸೈಡ್ ಮಾಡಲಾಯಿತು. ಈಗ ಈ ಐತಿಹಾಸಿಕ ಕಾರ್ಯಾಚರಣೆಯ ಇಂಚಿಂಚು ವಾಸ್ತವ ಚಿತ್ರಣವನ್ನು ಕಿರುತೆರೆಯಲ್ಲಿ ನೋಡುವ ಅವಕಾಶ ಭಾರತೀಯರಿಗೆ ಸಿಕ್ಕಿದೆ. ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ HistoryTV18 ವಾಹಿನಿ ಇಂಥದ್ದೊಂದು ಪ್ರಯತ್ನ ಮಾಡಿದೆ. ಸರ್ಜಿಕಲ್ ಸ್ಟ್ರೈಕ್ನ ಯೋಜನೆ ರೂಪಿತವಾಗಿದ್ದು, ಅದನ್ನು ಕಾರ್ಯಗತಗೊಳಿಸಿದ್ದು, ಹೀಗೆ ಬಹಳ ಆಸಕ್ತಿಕರ ವಿವರಗಳನ್ನ ಬಹಳ ವಿನೂತನ ರೀತಿಯ ನಿರೂಪಣೆ ಮೂಲಕ ಪ್ರಸ್ತುಪಡಿಸಲಾಗಿದೆ. ಸರ್ಜಿಕಲ್ ದಾಳಿಯಲ್ಲಿ ಭಾಗಿಯಾಗಿದ್ದ ಸೇನಾ ತಂಡದ ನಾಯಕನ ಬಾಯಿಂದಲೇ ಎಲ್ಲಾ ವಿವರಗಳನ್ನು ಕೇಳಬಹುದು. ಆದರೆ, ಭದ್ರತಾ ದೃಷ್ಟಿಯಿಂದ ಈ ಯೋಧರ ಗುರುತಗಳನ್ನು ಬಹಿರಂಗಪಡಿಸಲಾಗಿಲ್ಲ ಎಂಬುದನ್ನು ನೀವು ಗಮನಿಸಬೇಕು. ಸರ್ಜಿಕಲ್ ದಾಳಿಯಲ್ಲಿ ಪಾಲ್ಗೊಂಡ ಯೋಧರು ನೀಡಿದ ವಿವರಣೆಯಂತೆಯೇ ಎಲ್ಲಾ ದಾಳಿ ದೃಶ್ಯಗಳನ್ನು ಮರುಸೃಷ್ಟಿ ಮಾಡಿ, ವಾಸ್ತವತೆಯಷ್ಟೇ ರೋಚಕವಾಗಿ ಚಿತ್ರೀಕರಿಸಲಾಗಿದೆ. ಸರ್ಜಿಕಲ್ ದಾಳಿ ನಡೆಸಲು ಎಲ್ಲಿ, ಯಾವಾಗ ಮತ್ತು ಹೇಗೆ ಯೋಜನೆ ರೂಪಿತವಾಯಿತು, ಹೇಗೆ ಕಾರ್ಯಗತಗೊಳಿಸಲಾಯಿತು, ವೈರಿಯ ಪ್ರದೇಶ, ಅಲ್ಲಿನ ಸವಾಲುಗಳು, ಯೋಜನೆಗಳು, ಶಸ್ತ್ರಾಸ್ತ್ರಗಳು ಎಂಬಿತ್ಯಾದಿ ಸೂಕ್ಷ್ಮ ವಿವರಗಳಿವೆ. ಕಾರ್ಯಾಚರಣೆ ಮುಗಿಸಿ ಭಾರತೀಯ ಗಡಿಯೊಳಗೆ ನಮ್ಮ ಯೋಧರು ವಾಪಸ್ ಧಾವಿಸಿ ಬಂದ ರೋಚಕ ಪಯಣದ ವಿವರವೂ ಇದೆ. ಎರಡು ತಂಡಗಳು ನಡೆಸಿದ ಅಮೋಘ ಕಾರ್ಯಾಚರಣೆಯನ್ನು ವಾಸ್ತವದ ರೀತಿಯಲ್ಲೇ ಮರುಸೃಷ್ಟಿಸಲಾಗಿದೆ. ವೈರಿ ಪ್ರದೇಶದೊಳಗೆ ಭಾರತ ನಡೆಸಿದ ದಿಟ್ಟ ಸೇನಾ ಕಾರ್ಯಚರಣೆಯ ನೈಜ ಕಥೆ ಇದು. ಸತ್ಯಕ್ಕೆ ಬದ್ಧವಾಗಿ ತಯಾರಿಸಲಾದ ಈ ಒಂದು ಗಂಟೆಯ ವಿಡಿಯೋ ಮೂಲಕ ಭಾರತೀಯ ಸೇನೆಯ ದಿಟ್ಟತನ ಮತ್ತು ಸಾಮರ್ಥ್ಯಕ್ಕೆ ಒಂದು ಸಲಾಮು. HistoryTV18 ವಾಹಿನಿಯು ಇಂಥದ್ದೊಂದು ಅಪೂರ್ವ ಕಾರ್ಯಕ್ರಮವನ್ನು ಜನವರಿ 22ರಂದು ರಾತ್ರಿ 9ಗಂಟೆಗೆ ಪ್ರಸಾರ ಮಾಡಲಿದೆ. ಭಾರತೀಯ ಸೇನಾ ಕಾರ್ಯಾಚರಣೆ ಬಹಳ ಚುರುಕು, ಪರಿಣಾಮಕಾರಿ ಮತ್ತು ಕರಾರುವಾಕ್ ಆಗಿತ್ತು. ಅದು ಅಕ್ಷರಶಃ ಸರ್ಜಿಕಲ್ ಸ್ಟ್ರೈಕ್. ಆ ದಾಳಿಯ ಹೀರೋಗಳು ನಮ್ಮ ಭಾರತೀಯ ಸೈನಿಕರು. ಇವರು ತಾಯ್ನಾಡು ಉಳಿಸಲು ಎಲ್ಲೇ ಇರಲಿ, ಯಾವಾಗೇ ಇರಲಿ ಸದಾ ಸನ್ನದ್ಧ.

webtech_news18

ಇತ್ತೀಚಿನದು Live TV
corona virus btn
corona virus btn
Loading