ಹೋಮ್ » ವಿಡಿಯೋ » ದೇಶ-ವಿದೇಶ

Pulwama Terror Attack: ಹುತಾತ್ಮ ಯೋಧರಿಗೆ ದೇಶದ ವಿವಿಧೆಡೆ ಗೌರವ ಸೂಚಿಸಿದ ದೃಶ್ಯಗಳು

ದೇಶ-ವಿದೇಶ11:45 AM February 16, 2019

ಪುಲ್ವಾಮಾದಲ್ಲಿ ಉಗ್ರನ ದಾಳಿಗೆ 40 ಸಿಆರ್ಪಿಎಫ್ ಯೋಧರು ಮೃತಪಟ್ಟಿದ್ದರು. ವೀರ ಮರಣವಪ್ಪಿದ ಯೋಧರ ಮನೆಗಳಲ್ಲಿ ರೋದನ ಮುಗಿಲುಮುಟ್ಟಿದೆ. ಉತ್ತರ ಪ್ರದೇಶದ ವಾರಾಣಸಿಯಲ್ಲಿ ಆ ಭಾಗದ ಯೋಧನ ಅಂತ್ಯಕ್ರಿಯೆಗೆ ಸಾವಿರಾರು ಜನರು ನೆರೆದಿದ್ದರು. ಅದೇ ರಾಜ್ಯದ ಚಂದ್ರೋಲಿಯಲ್ಲಿ ಯೋಧನ ಪಾರ್ಥಿವ ಶರೀರವನ್ನು ವಾಹನದಲ್ಲಿ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಯಿತು. ಈ ವೇಳೆ ರಸ್ತೆ ಉದ್ದಕ್ಕೂ ಸೇರಿದ್ದ ಜನರು ಹುತಾತ್ಮನಿಗೆ ಜೈಕಾರ ಹಾಕಿದರು. ಉತ್ತರಾಖಂಡ್ ರಾಜ್ಯದ ವೀರೇಂಡ ಗ್ರಾಮದಲ್ಲಿ ಮಿಲಿಟರಿ ಗೌರವದೊಂದಿಗೆ ಹುತಾತ್ಮ ಯೋಧನ ಅಂತ್ಯಕ್ರಿಯೆ ನೆರವೇರಿತು. ಈ ವೇಳೆ ನೂರಾರು ಸ್ಥಳೀಯ ಜನರು ಸೇರಿದ್ದರು. ಇನ್ನು, ಡೆಹ್ರಾಡೂನ್ನಲ್ಲಿ ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾವಿರಾರು ಜನರು ಸೇರಿದ್ದರು.

sangayya

ಇತ್ತೀಚಿನದು Live TV

Top Stories