ಹೋಮ್ » ವಿಡಿಯೋ » ದೇಶ-ವಿದೇಶ

ಬಿಜೆಪಿ, ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು; ಎರಡಕ್ಕೂ ಮತ ಹಾಕಬೇಡಿ: ಮಾಯಾವತಿ ಕರೆ

ದೇಶ-ವಿದೇಶ17:08 PM May 02, 2019

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಉತ್ತರ ಪ್ರದೇಶದಲ್ಲಿ ಮಹಾಘಟಬಂಧನ್ ಸೋಲಿಗೆ ಎರಡೂ ಪಕ್ಷಗಳು ಒಟ್ಟಿಗೆ ಕೆಲಸ ಮಾಡುತ್ತಿವೆ. ನೀವು ಕಾಂಗ್ರೆಸ್ಗೂ ಮತ ಹಾಕಬೇಡಿ, ಬಿಜೆಪಿಗೂ ಮತ ಹಾಕಬೇಡಿ ಎಂದು ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಉ.ಪ್ರ. ಜನತೆಗೆ ಕರೆ ನೀಡಿದ್ದಾರೆ. ಬಿಜೆಪಿಗೆ ಲಾಭವಾಗದ ರೀತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಪ್ರಿಯಾಂಕಾ ಗಾಂಧಿ ನೀಡಿದ ಹೇಳಿಕೆಯನ್ನು ತಿರಸ್ಕರಿಸಿದ ಮಾಯಾವತಿ, ಸಂಸತ್ನಲ್ಲಿ ನರೇಂದ್ರ ಮೋದಿ ಅವರನ್ನು ರಾಹುಲ್ ಗಾಂಧಿ ಅಪ್ಪಿಕೊಂಡಿದ್ದು ಎರಡೂ ಪಕ್ಷಗಳ ಮಿತ್ರತ್ವವನ್ನು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.

sangayya

ಇತ್ತೀಚಿನದು Live TV