ಚಿತ್ರದುರ್ಗ: ನರೇಂದ್ರ ಮೋದಿ ಅವರು 5 ವರ್ಷದಿಂದ ಚೌಕಿದಾರ್ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಇವರು ಸ್ವಯಂ ಘೋಷಿತ ಚೌಕಿದಾರ್. ಮೋದಿ ಹೋದಲೆಲ್ಲಾ ಚೌಕಿದಾರ್ ಎಂದು ಹೇಳಿಕೊಂಡರೆ, ಜನರು ಚೌಕಿದಾರ್ ಚೋರ್ ಹೈ ಎಂದು ಹೇಳುತ್ತಾರೆ. ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪರಿವರ್ತನಾ ಸಮಾವೇಶದಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ, ಚೌಕಿದಾರ್ ಬಡವರ ಮನೆಯಲ್ಲಲ್ಲ ಸಾಹುಕಾರರ ಮನೆಯಲ್ಲಿರುತ್ತಾರೆ ಎಂದು ಹೇಳುವ ಮೂಲಕ ಮೋದಿ ಅವರು ಬಡವರ ವಿರೋಧಿ ಎಂದು ಟೀಕೆ ಮಾಡಿದ್ದಾರೆ.