ಹೋಮ್ » ವಿಡಿಯೋ » ದೇಶ-ವಿದೇಶ

ಮಹಾ ಪತನ: ಮುಖ್ಯಮಂತ್ರಿ ಸ್ಥಾನಕ್ಕೆ ಫಡ್ನವೀಸ್ ರಾಜೀನಾಮೆ

ದೇಶ-ವಿದೇಶ16:28 PM November 26, 2019

ಮುಂಬೈ (ನ.26): ಬಹುಮತ ಸಾಬೀತು ಮಾಡುವಂತೆ ಸುಪ್ರೀಂಕೋರ್ಟ್​ ಆದೇಶಿಸಿದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ಮತ್ತೆ ಗರಿಗೆದರಿದವು. ಬಹುಮತ ಸಾಬೀತು ಪಡಿಸಲು ಸಾಕಷ್ಟು ಸರ್ಕಸ್​ ಮಾಡಿದ ಬಿಜೆಪಿ ಕಡೆಗೆ ಸೋಲೊಪ್ಪಿಕೊಂಡಿದೆ. ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಎನ್​ಸಿಪಿ ರೆಬೆಲ್​ ನಾಯಕ ಅಜಿತ್​ ಪವಾರ್​​ ರಾಜೀನಾಮೆ ನೀಡಿದ ಬೆನ್ನಲ್ಲೇ, ಪತ್ರಿಕಾಗೋಷ್ಠಿ ಕರೆದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯುವ ಬಿಜೆಪಿ ಕನಸು ಕನಸಾಗೇ ಉಳಿದಿದೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading