ಹೋಮ್ » ವಿಡಿಯೋ » ದೇಶ-ವಿದೇಶ

ಲೋಕಸಭೆಯಲ್ಲಿ ಆಡಿಯೋ ಹಗರಣದ ಸದ್ದು ಮಾಡಿದ ಮಲ್ಲಿಕಾರ್ಜುನ ಖರ್ಗೆ

ದೇಶ-ವಿದೇಶ11:36 AM February 12, 2019

ನವದೆಹಲಿ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಖರೀದಿ ಮಾಡಲು ಯತ್ನಿಸಿದಾರೆ ಎನ್ನೋ ಆಡಿಯೋ ವಿಚಾರ ಇವತ್ತು ಲೋಕಸಭೆಯಲ್ಲೂ ಚರ್ಚೆಯಾಯಿತು. ಯಡಿಯೂರಪ್ಪ ಅವರ ಆಡಿಯೋ ವಿಷಯ ಪ್ರಸ್ತಾಪಿಸಿದ ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಆಮಿಷ ಒಡ್ಡಿದ್ದಾರೆ. ನನ್ನದೇ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಬರುವ ಗುರುಮಠಕಲ್ ಶಾಸಕರಿಗೂ ಆಮಿಷ ಒಡ್ಡಿದ್ದಾರೆ. ಶಾಸಕರೊಬ್ಬರ ಮಗನ ಮೂಲಕ ಕುದುರೆ ವ್ಯಾಪಾರಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇಷ್ಟೇಯಲ್ಲದೆ ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಸ್ಪೀಕರ್ಗೆ 50 ಕೋಟಿ ರೂಪಾಯಿ ನೀಡುವ ಬಗ್ಗೆ ಮಾತನಾಡಿದ್ದಾರೆ. ಕಾನೂನು ತೊಡಕು ಬಂದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ನಿಭಾಯಿಸುತ್ತೇವೆ ಎಂದಿದ್ದಾರೆ.

sangayya

ಇತ್ತೀಚಿನದು Live TV

Top Stories