ಈ ವರ್ಷ ಅಕ್ಷರಶಃ ಮದುವೆಯ ಸುಗ್ಗಿಯಂತಿತ್ತು. 2018ರಲ್ಲಿ ನಡೆದ ವಿವಾಹಗಳು ಕೇವಲ ರಾಷ್ಟ್ರ ಮಟ್ಟವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುವ ಮೂಲಕ ಜಗತ್ತಿನ ಗಮನ ಸೆಳೆದಿವೆ. ವಿಶ್ವ ಕುಬೇರರ ಸಾಲಿನಲ್ಲಿ ನಿಲ್ಲುವ ಅಂಬಾನಿ ಮಗಳ ವಿವಾಹದಿಂದ ಹಿಡಿದು, ಪ್ರಖ್ಯಾತ ಬಾಲಿವುಡ್ ತಾರೆಯರಾದ ದೀಪಿಕಾ-ರಣವೀರ್, ಪ್ರಿಯಾಂಕಾ-ನಿಕ್ ಸೇರಿದಂತೆ ಹಲವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು ಇದಕ್ಕೆ ಪ್ರಮುಖ ಕಾರಣ.