ಹೋಮ್ » ವಿಡಿಯೋ » ಮನರಂಜನೆ

ಅರ್ಜುನ್​ ಇ-ಮೇಲ್​ ಹ್ಯಾಕ್​ ಮಾಡಿದ್ದು ಯಾರು: ಮತ್ತೆ ಸಂಕಷ್ಟಕ್ಕೆ ಸಿಲುಕುತ್ತಾರಾ ಚೇತನ್​?

ಮನರಂಜನೆ01:03 PM IST Oct 25, 2018

ಅರ್ಜುನ್ ಸರ್ಜಾ ಇ-ಮೇಲ್​ ಹಾಗೂ ಟ್ವಿಟರ್​ ಹ್ಯಾಕ್​ ಆಗಿದೆ ಎಂದು ಅವರ ಮ್ಯಾನೇಜರ್​ ಇಂದು ಸೈಬರ್​ ಕ್ರೈಮ್​ ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ಇ-ಮೇಲ್​ ಹ್ಯಾಕ್​ ಮಾಡಿ ಬೇರೆಯವರಿಗೆ ಮೇಲ್​ ಕಳುಹಿಸಲಾಗುತ್ತಿದೆ. ಕಳೆದ ಆರು ತಿಂಗಳಿನಿಂದ ಅವರ ಟ್ವಿಟರ್​ ಖಾತೆ ಹಾಗೂ ಇ-ಮೇಲ್​ ಹ್ಯಾಕ್​ ಮಾಡಿ , ವೈಯಕ್ತಿಕ ಮಾಹಿತಿಯನ್ನು ಕದಿಯಲಾಗುತ್ತಿದೆ. ಅದಕ್ಕಾಗಿಯೇ ಈಗ ದೂರು ನೀಡಿದ್ದೇವೆ. ಈ ಕುರಿತಾಗಿ ಬೆಂಗಳೂರು ಪೊಲೀಸ್​ ಆಯುಕ್ತ ಸುನೀಲ್​ ಕುಮಾರ್​ ಅವರಿಗೆ ದೂರು ನೀಡಲಾಗಿದೆ. ಈ ವೇಳೆ ಹ್ಯಾಕ್​ ಮಾಡಲಾಗಿರುವುದಕ್ಕೆ ದಾಖಲೆಗಳನ್ನೂ ಪೊಲೀಸರಿಗೆ ನೀಡಲಾಗಿದೆಯಂತೆ. ಇದನ್ನು ಗಮನಿಸಿದರೆ ಇತ್ತೀಚೆಗಷ್ಟೆ ಚೇತನ್​, ಅರ್ಜುನ್​ ತಮಗೆ ಕಳುಹಿಸಿದ ಇ-ಮೇಲ್​ ಅನ್ನು ತಮ್ಮ ಮುಖಪುಟದಲ್ಲಿ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜುನ್​ ದೂರು ನೀಡಿರಬಹುದು ಎಂದು ಹೇಳಲಾಗುತ್ತಿದೆ. 

Anitha E

ಇತ್ತೀಚಿನದು Live TV