Rana Daggubati: ರಾಣಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಿಹೀಕಾ ಬಜಾಜ್ ಅವರೊಂದಿಗಿನ ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ಜೊತೆಗೆ ‘ಆಕೆ ಒಪ್ಪಿದ್ದಾಳೆ‘ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಸಾಕಷ್ಟು ಅಭಿಮಾನಿಗಳು ರಾಣಾ ಮತ್ತು ಮಿಹೀಕಾ ಬಜಾಜ್ ಅವರ ಫೋಟೋಗೆ ಅಭಿನಂದನೆಗಳನ್ನು ಎಂದು ಬರೆಯುತ್ತಿದ್ದಾರೆ. ಜೊತೆಗೆ ಸೆಲೆಬ್ರಿಟಿಗಳಾದ ಸಮಂತಾ ಅಕ್ಕಿನೇನಿ, ಕಿಯಾರಾ ಅಡ್ವಾನಿ ಮುಂತಾದವರು ವಿಶ್ ಮಾಡಿದ್ದಾರೆ.