ಕುಸ್ತಿ ಮಾಡೋರಿಗೆ ಲಂಗೋಟಿಯೆಂಬುದು ಗತ್ತು. ಆದರೆ, ನಮಗೆ ಆ ಅಭ್ಯಾಸ ಇಲ್ಲವಲ್ಲ ಹಾಗಾಗಿ, ಕ್ಯಾರವಾನ್ನಿಂದ ಲಂಗೋಟಿ ಹಾಕಿಕೊಂಡು ಕೆಳಗಿಳಿಯುವಾಗ ತುಂಬ ಮುಜುಗರ ಆಗುತ್ತಿತ್ತು. ಹೇಗೆ ಕಾಣುತ್ತಿದೆಯೋ, ಸುತ್ತಲೂ ಸೇರಿರುವ ಜನರು ಏನಂದುಕೊಳ್ಳುತ್ತಾರೋ ಎಂದು ಮುಜುಗರ ಆಗುತ್ತಿತ್ತು. ಆಮೇಲೆ ಅಭ್ಯಾಸವಾಯಿತು. ಸಿನಿಮಾದಲ್ಲಿ ಒಳ್ಳೆಯ ಕಾಸ್ಟೂಮ್ ಕೂಡ ನಾನು ಹಾಕಿದ್ದೇನೆ ಎಂದು ಪೈಲ್ವಾನ್ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ತಮ್ಮ ಅನುಭವವನ್ನು ನ್ಯೂಸ್18 ಕನ್ನಡ ಜೊತೆಗೆ ಹಂಚಿಕೊಂಡಿದ್ದಾರೆ.