ಹೋಮ್ » ವಿಡಿಯೋ » ಮನರಂಜನೆ

ನೆಚ್ಚಿನ ನಟರ ಕಟೌಟ್​ಗೆ ಹಾಲಿನಾಭಿಷೇಕ ಮಾಡುವಾಗ ಎಚ್ಚರಿಕೆ: ಅದೃಷ್ಟ ಕೈ ಕೊಟ್ಟರೆ ಜೀವಕ್ಕೆ ಬರುತ್ತೆ ಕುತ್ತು..!

ಮನರಂಜನೆ06:01 PM IST Jan 10, 2019

ಸ್ಟಾರ್​ ನಟರ ಸಿನಿಮಾ ಬಿಡುಗಡೆಯಾದರೆ ಸಾಕು ಅಭಿಮಾನಿಗಳು ದೊಡ್ಡ ದೊಡ್ಡ ಕಟೌಟ್​ಗಳನ್ನೇ ಚಿತ್ರಮಂದಿರಗಳ ಎದುರು ನಿಲ್ಲಿಸುತ್ತಾರೆ. ಅದು ಅವರ ಅಭಿಮಾನದ ಪ್ರತೀಕವೆಂಬ ಭಾವನೆ ಅವರಿಗಿರುತ್ತದೆ. ಆದರೆ ಇಂತಹ ಕಟೌಟ್​ಗಳಿಗೆ ಮೇಲೆ ಹತ್ತಿ ಹಾಲಿನಾಭಿಷೇಕವನ್ನೆಲ್ಲ ಮಾಡುತ್ತಾರೆ. ಇಂತಹ ಸಮಯದಲ್ಲಿ ಕೊಂಚ ಎಚ್ಚರ ಹಾಗೂ ಆಯಾ ತಪ್ಪಿದರೂ ಜೀವಕ್ಕೆ ಕುತ್ತು ಬರೋದು ಖಂಡಿತ. ತಮಿಳುನಾಡಿನ ತಿರುಕೋವಿಲೂರಿನಲ್ಲೂ ನಡೆದದ್ದು ಅದೇ. ನಟ ಅಜಿತ್ ಅಭಿನಯದ ತಮಿಳು ಸಿನಿಮಾ 'ವಿಶ್ವಾಸಂ' ಈಗಷ್ಟೆ ತೆರೆ ಕಂಡಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಸಂಭ್ರಮದಲ್ಲಿರುವ ಅಭಿಮಾನಿಗಳು ಇಂದು ಅಜಿತ್​ ಅವರ ಕಟೌಟ್​ಗೆ ಹಾಲಿನಾಭಿಷೇಕ ಮಾಡಲು ಹೋದಾಗ, ಕಟೌಟ್​ ಇದ್ದಕ್ಕಿದ್ದಂತೆ ಕೆಳಗೆ ಬಿದ್ದು ಅದರ ಮೇಲಿದ್ದ ಐದು ಮಂದಿಗೆ ಗಾಯಗೊಂಡಿದ್ದಾರೆ. ಇಲ್ಲಿದೆ ಅದರ ವಿಡಿಯೋ..!

Anitha E

ಇತ್ತೀಚಿನದು Live TV