ಹೋಮ್ » ವಿಡಿಯೋ » ಮನರಂಜನೆ

ಅಭಿಮಾನಿಯನ್ನು ಹಿಂದೆ ಕೂರಿಸಿಕೊಂಡು ಬುಲೆಟ್​ ಓಡಿಸಿದ ರೋರಿಂಗ್​ ಸ್ಟಾರ್​ ಶ್ರೀಮುರಳಿ

ಮನರಂಜನೆ05:15 PM IST Feb 02, 2019

ನವದುರ್ಗೆಯರ ಸಮ್ಮುಖದಲ್ಲಿ ಶ್ರೀಮುರಳಿ ಅಭಿನಯದ 'ಭರಾಟೆ' ಚಿತ್ರೀಕರಣ ಇಂದು ಜೋರಾಗಿ ನಡೆದಿತ್ತು.  ‌ಚಿತ್ರೀಕರಣಕ್ಕಾಗಿ ನೆಲಮಂಗಲದಲ್ಲಿ 75 ಲಕ್ಷ ಮೌಲ್ಯದ ಸೆಟ್​ ನಿರ್ಮಿಸಲಾಗಿತ್ತು. ಈ ವೇಳೆ ಚಿತ್ರೀಕರಣ ನೋಡಲು ಅಭಿಮಾನಿಯೊಬ್ಬರು ಬುಲೆಟ್​ನಲ್ಲಿ ಬಂದಿದ್ದರು. ಅದನ್ನು ಕಂಡ ಶ್ರೀ ಮುರಳಿ ಅಭಿಮಾನಿಯನ್ನೇ ಬುಲೆಟ್​ನಲ್ಲಿ ಕೂರಿಸಿಕೊಂಡು ಒಂದು ರೌಂಡ್​ ಹೊಡೆದಿದ್ದಾರೆ. ನಂತರ ಅಭಿಮಾನಿಗೆ ಬುಲೆಟ್​ ಹೇಗೆ ಓಡಿಸಬೇಕು ಎಂದು ಬುದ್ದಿ ಹೇಳಿದ್ದಾರೆ.  ಶ್ರೀ ಮುರಳಿ ಜೊತೆ ಸಾಯಿಕುಮಾರ್,  ಶ್ರೀಲೀಲಾ, ಅವಿನಾಶ್, ರಾಮ್, ಸಂಗೀತಾ , ವಾಣಿಶ್ರೀ ಇನ್ನು ಅನೇಕರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸುಪ್ರೀತ್​ ನಿರ್ಮಾಣದ ಈ ಚಿತ್ರಕ್ಕೆ ಚೇತನ್ ಕುಮಾರ್ ನಿರ್ದೇಶನವಿದೆ. 

Anitha E

ಇತ್ತೀಚಿನದು Live TV