ಹೋಮ್ » ವಿಡಿಯೋ » ಮನರಂಜನೆ

Video: ಇತಿಹಾಸದ ಪುಟ ಸೇರಿದ ಮೈಸೂರಿನ ಪ್ರೀಮಿಯರ್​ ಸ್ಟುಡಿಯೊ

ಮನರಂಜನೆ03:44 PM IST Sep 22, 2018

ಸಾವಿರಾರು ಜನರಿಗೆ ಅನ್ನ ನೀಡುತ್ತಿದ್ದ ಪ್ರೀಮಿಯರ್ ಸ್ಟುಡಿಯೊ ಇನ್ನೂ ನೆನಪು ಮಾತ್ರ. ಮೈಸೂರು-ಹುಣಸೂರು ರಸ್ತೆ  ಬಿ.ಎಂ.ಹೆಚ್​ ರಸ್ತೆಯಲ್ಲಿರುವ ಸ್ಟುಡಿಯೋ ಇತಿಹಾಸದ ಪುಟ ಸೇರಿದೆ.  ವರನಟ ಡಾ. ರಾಜ್ ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಷ , ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಅನೇಕ ನಾಯಕರ ಸಿನಿಮಾಗಳ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದ ಈ ಸ್ಟುಡಿಯೊ ಕಳೆದ 20 ವರ್ಷಗಳ ಹಿಂದೆ ಬೆಂಕಿ ಅವಘಡದಿಂದಾಗಿ ಸುಟ್ಟು ಹೋಗಿತ್ತು. ಅಂದಿನಿಂದ ಇಂದಿನವರೆಗೂ ತೆರೆದಿಲ್ಲ. ಇದಷ್ಟೇ ಅಲ್ಲದೇ ಇತ್ತೀಚೆಗಿನ ಕಲಾವಿದರು ಒಳಾಂಗಣ ಚಿತ್ರೀಕರಣಕ್ಕೆ ಒತ್ತು ಕೊಡದೇ ಇದ್ದದ್ದು ಕೂಡ ಒಂದು ಕಾರಣ ಎನ್ನಲಾಗಿದೆ. ಸದ್ಯ ಸ್ಟುಡಿಯೋದಲ್ಲಿ ಯಾವುದೇ ಸಿನಿಮಾಗಳ ಚಿತ್ರೀಕರಣ ನಡೆಯದ ಕಾರಣಕ್ಕೆ ಸ್ಟುಡಿಯೋವನ್ನು ನಡೆಸಲು ಯಾವುದೇ ಹಣದ ಮೂಲ ಇಲ್ಲವಾಗಿದೆ. ಇದರಿಂದಾಗಿ ನೆಲಸಮಗೊಳಿಸಿದ ಆ ಜಾಗದಲ್ಲಿ ಅಪಾರ್ಟ್​ಮೆಂಟ್​ ಕಟ್ಟಲಿದ್ದೇವೆ ಈ ಸ್ಟುಡಿಯೋದ ನಿರ್ದೇಶಕ ನಾಗಕುಮಾರ್  ತಿಳಿಸಿದ್ದಾರೆ. 

webtech_news18

ಇತ್ತೀಚಿನದು Live TV