Corona »

ಅರ್ಧ ದಿನದಲ್ಲೇ ದಾಖಲೆಯ 84 ಹೊಸ ಪ್ರಕರಣಗಳು; ಕರ್ನಾಟಕಕ್ಕೆ ‘ಮಹಾ’ ಗಂಡಾಂತರ

  • 15:51 PM May 18, 2020
  • coronavirus-latest-news
Share This :

ಅರ್ಧ ದಿನದಲ್ಲೇ ದಾಖಲೆಯ 84 ಹೊಸ ಪ್ರಕರಣಗಳು; ಕರ್ನಾಟಕಕ್ಕೆ ‘ಮಹಾ’ ಗಂಡಾಂತರ

ರಾಜ್ಯದಲ್ಲಿ ಕೊರೋನಾ ಸೋಂಕು ಗಣನೀಯವಾಗಿ ಹೆಚ್ಚಳಗೊಳ್ಳುತ್ತಿದೆ. ನಿನ್ನೆ ಸಂಜೆಯಿಂದ ಕೇವಲ 12 ಗಂಟೆ ಅವಧಿಯಲ್ಲಿ 84 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ದಾಖಲಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 1,231ಕ್ಕೆ ಏರಿದಂತಾಗಿದೆ. ರಾಜ್ಯದಲ್ಲಿ 12 ಗಂಟೆ ಅವಧಿಯಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು ಇದೇ ಮೊದಲು.