ಹೋಮ್ » ವಿಡಿಯೋ

ನೆಲಮಂಗಲ: ಕಾಲೇಜು ವಿದ್ಯಾರ್ಥಿನಿ ಮೇಲೆ ಹರಿದ ಬಿಎಂಟಿಸಿ ಬಸ್: ಸ್ಥಳದಲ್ಲೇ ಸಾವು

ವಿಡಿಯೋ18:41 PM November 13, 2018

ಬಿಎಂಟಿಸಿ ಬಸ್ ಹರಿದು ಕಾಲೇಜು ವಿದ್ಯಾರ್ಥಿನಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ನಡೆದಿದೆ. ಎಂದಿನಂತೆ ಕಾಲೇಜು ಮುಗಿಸಿಕೊಂಡು ತಮ್ಮ ಊರಾದ ಹುಲ್ಲೇನಗೌಡನಹಳ್ಳಿಗೆ ವಿದ್ಯಾರ್ಥಿ ಸುಶ್ಮಿತಾ ತೆರಳುತ್ತಿದ್ದಳು. ನೆಲಮಂಗಲ ಬಸ್ ನಿಲ್ದಾಣದ ಬಳಿ ಬಸ್ ಹತ್ತಿದ ಸುಶ್ಮಿತಾ, ಬಸ್ ನ ಡೋರ್ ಬಳಿ ನಿಂತಿದ್ದಾಳೆ. ಆಕೆ ಬಸ್ ನ ಒಳ ಹೋಗುವಷ್ಟರಲ್ಲಿ ಚಾಲಕ ಆಕೆಯನ್ನ ನೋಡದೆ ಡೋರ್ ಲಾಕ್ ಮಾಡಿದ್ದಾನೆ. ಇದರಿಂದಾಗಿ ಸುಶ್ಮಿತಾ ಹೊರಬಿದ್ದಿದ್ದಾಳೆ. ಇದನ್ನು ಗಮನಿಸದ ಡ್ರೈವರ್ ಆಕೆಯ ಮೇಲೆಯೇ ಬಸ್ ಹರಿಸಿದ್ದಾನೆ. ಇದರಿಂದಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಇಲ್ಲಿನ ಪ್ರತ್ಯಕ್ಷ ದರ್ಶಿಗಳು ಹೇಳುತ್ತಿದ್ದಾರೆ. ಇನ್ನೂ ಕೆಂಗೇರಯ 37ನೇ ಡಿಪೋಗೆ ಸೇರಿದ ಬಿಎಂಟಿಸಿ ಬಸ್ ಇದಾಗಿದೆ. ನೆಲಮಂಗಲ ಪಟ್ಟಣ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shyam.Bapat

ಇತ್ತೀಚಿನದು

Top Stories

//