ಹೋಮ್ » ವಿಡಿಯೋ

ಆನೇಕಲ್: ಭೀಕರ ರಸ್ತೆ ಅಪಘಾತ: ನಾಲ್ವರ ದುರ್ಮರಣ: ಓರ್ವನ ಸ್ಥಿತಿ ಗಂಭೀರ

ವಿಡಿಯೋ11:09 AM November 18, 2018

ಡಿಸೇಲ್ ಖಾಲಿಯಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಆಂಬ್ಯುಲೇನ್ಸ್ ಓಮ್ನಿ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯ ತಮಿಳುನಾಡಿನ ಹೊಸೂರು ಬಳಿ ಇಂದು ಮುಂಜಾನೆ ನಡೆದಿದೆ.. ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ಕು ಮಂದಿ ಸಾವನ್ನಪ್ಪಿದ್ದು, ಚಾಲಕ ಜೈಸೂರ್ಯ, ಸಹಾಯಕ ಮದನ್ ಕುಮಾರ್ ಎಂದು ತಿಳಿದು ಬಂದಿದ್ದು, ಉಳಿದ ಇಬ್ಬರು ರೋಗಿಗಳ ಮಾಹಿತಿ ಲಭ್ಯವಾಗಿಲ್ಲ. ಮೃತ ನಾಲ್ವರು ತಿರುಚ್ಚಿ ಮೂಲದವರಾಗಿದ್ದು, ಎಚ್1 ಎನ್ 1 ಜ್ವರದ ಚಿಕಿತ್ಸೆಗಾಗಿ ತಿರುಚ್ಚಿ ಸರ್ಕಾರಿ ಆಸ್ಪತ್ರೆಯಿಂದ ಬೊಮ್ಮಸಂದ್ರ ಸಮೀಪದ ನಾರಾಯಣ ಹೆಲ್ತ್ ಸಿಟಿಗೆ ಹೆಚ್ಚಿನ ಚಿಕಿತ್ಸೆಗೆ ಆಗಮಿಸುತ್ತಿದ್ದ ವೇಳೆ ಮುಂಜಾನೆ 3:30 ಸುಮಾರಿನಲ್ಲಿ ಅಪಘಾತ ಸಂಭವಿಸಿದೆ. ಮುಂಜಾನೆ ಹಿಬ್ಬನಿ ಕವಿದಿದ್ದ ಕಾರಣ ಮತ್ತು ರಸ್ತೆ ಬದಿಯಲ್ಲಿ ಲಾರಿ ನಿಲ್ಲಿಸಿರುವ ಬಗ್ಗೆ ಯಾವುದೇ ಸೂಚನಾ ಫಲಕಗಳನ್ನು ಹಾಕದ ಹಿನ್ನೆಲೆ ಅಪಘಾತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಆಂಬ್ಯುಲೇನ್ಸ್ ನಜ್ಜುಗುಜ್ಜಾಗಿದೆ. ಸ್ಥಳಕ್ಕಾಗಮಿಸಿದ ಹೊಸೂರು ಪೊಲೀಸರು ಗಾಯಾಳುವನ್ನು ಹೊಸೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಶವಗಳನ್ನು ಹೊರತೆಗೆದು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ‌. ಜೊತೆಗೆ ಕ್ರೇನ್ ಮೂಲಕ ಅಪಘಾತವಾದ ವಾಹನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Shyam.Bapat

ಇತ್ತೀಚಿನದು

Top Stories

//