ಹೋಮ್ » ವಿಡಿಯೋ

ಬೆಳಗಾವಿಯಲ್ಲಿ ಬುದ್ಧಿಜೀವಿಗಳ ಮೇಲೆ ಅನಂತಕುಮಾರ್ ಹೆಗಡೆ ವಾಗ್ದಾಳಿ

ರಾಜ್ಯ02:18 PM IST Jan 17, 2018

ಬೆಳಗಾವಿ(ಜ. 17): ಇತ್ತೀಚೆಗೆ ಭಾರೀ ವಿವಾದಕ್ಕೆ ಕಾರಣವಾಗುತ್ತಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಈಗ ಮತ್ತೊಂದು ವಿವಾದಾಸ್ಪದ ಹೇಳಿಕೆ ಕೊಟ್ಟಿದ್ದಾರೆ. ಬುದ್ಧಿಜೀವಿಗಳು ಗೀಚಿದ್ದೆಲ್ಲಾ ಕಾವ್ಯಗಳಾಗುತ್ತವೆ. ಅವಕ್ಕೆ ಅರ್ಥವೇ ಇರೋದಿಲ್ಲ ಎಂದು ಅನಂತಕುಮಾರ್ ಹೆಗಡೆ ಹೇಳಿದ್ದಾರೆ. ಇಲ್ಲಿಯ ಕೆಎಲ್​ಇ ಜೀರಗಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅನಂತಕುಮಾರ್ ಹೆಗಡೆ, ಸರಕಾರಿ ಸೈಟ್​ಗೋಸ್ಕರ ಇವರು ವಿಚಾರವಾದಿಗಳ ಪಟ್ಟ ಕಟ್ಟಿಕೊಂಡಿರುತ್ತಾರೆ ಎಂದು ಬುದ್ಧಿಜೀವಿಗಳಿಗೆ ಟಾಂಗ್ ಕೊಟ್ಟಿದ್ದಾರೆ. “ನಾವು ಮಾನವರಾಗಬೇಕು ಎಂದು ಬುದ್ಧಿಜೀವಿಗಳು ಹೇಳುತ್ತಾರೆ. ಹಾಗಾದರೆ ನಾವು ದನಗಳಾ..? ನಾವು ಪ್ರಾಣಿಗಳ ಥರ ಇದ್ದೀವಾ? ನಾವು ಹುಟ್ಟಿದ್ದೇ ಮಾನವರಾಗಿ. ಇನ್ನು, ಆಗಬೇಕಿರುವುದು ದೇವರಾಗಿ. ಮನುಷ್ಯ ದೇವರಾಗಲು ಪ್ರಯತ್ನಿಸಬೇಕು. ಆದ್ರೆ ಕಲಿತಿರುವ ಸೋ ಕಾಲ್ಡ್ ಬುದ್ಧಿಜೀವಿಗಳು ಹೇಳುತ್ತಾರೆ ನಾವು ಮಾನವರಾಗಬೇಕು. ಅವರ ದೃಷ್ಟಿಯಲ್ಲಿ ನಾವು ಹೆಂಗೆ ಕಂಡಿದ್ದೇವೆ ಗೊತ್ತಿಲ್ಲ. ಅವರಿಗೆ ದೃಷ್ಟಿ ದೋಷ ಆಗಿರಬೇಕು,” ಎಂದು ಅನಂತಕುಮಾರ್ ಹೆಗಡೆ ಟೀಕಿಸಿದ್ದಾರೆ.

webtech_news18

ಇತ್ತೀಚಿನದು Live TV