ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿ ಎಂ ಬಸವರಾಜ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ 2022ರಲ್ಲಿ ಮಂಡಿಸಿದ್ದಾರೆ. ಇದು ರಾಜ್ಯ ಮುಖ್ಯಮಂತ್ರಿಯಾಗಿ ಮಾತ್ರವಲ್ಲದೆ ಕೊರೊನಾ ಸಂಕಷ್ಟ ಕಳೆದ ನಂತರದ ಮೊದಲ ಬಜೆಟ್ ಕೂಡಾ ಆಗಿರುವುದರಿಂದ ಜನರ ನಿರೀಕ್ಷೆ ಹೆಚ್ಚು. ಅಲ್ಲದೇ 2023ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಬಜೆಟ್ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.