ಹೋಮ್ » Rashmika Mandanna
Rashmika Mandanna

Latest News on Rashmika Mandanna

ರಶ್ಮಿಕಾ ಮಂದಣ್ಣ
Born : 05 Apr 1996
Birth Place: ಕೊಡಗು
ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. `ಕಿರಿಕ್ ಪಾರ್ಟಿ' (Kirik Party) ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಇವರು ಹುಟ್ಟಿ ಬೆಳೆದಿದ್ದೆಲ್ಲಾ ಕೊಡಗಿನಲ್ಲಿಯೇ. ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದ ಇವರು ಕ್ಲೀನ್ ಆಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಪಡೆದರು. ಇದಾದ ಬಳಿಕ ಇವರು ಹಿಂದೆ ತಿರುಗಿ ನೋಡಿಲ್ಲ. ಸಿನಿಮಾಗೆ ಬಂದ ಕೆಲ ತಿಂಗಳಿನಲ್ಲೇ ದೊಡ್ಡ ದೊಡ್ಡ ಸ್ಟಾರ್​ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ದಕ್ಷಿಣ ಭಾರತ ಸಿನಿಮಾರಂಗದಲ್ಲಿ ನಂಬರ್ ಒನ್ ಸ್ಥಾನದಲ್ಲಿ ರಶ್ಮಿಕಾ ವಿರಾಜಮಾನಳಾಗಿದ್ದಾರೆ. ಅದೃಷ್ಟ ದೇವತೆ ಈಕೆಯ ಪಕ್ಕದಲ್ಲಿ ಕುಳಿತಿರುವಂತೆ ಕಾಣುತ್ತದೆ. ಹೀಗಾಗಿಯೇ ಯಶಸ್ಸು, ಹಣ, ಕೀರ್ತಿ ಇದೆಲ್ಲವನ್ನು ಕೂಡ ಕೆಲವೇ ಕೆಲವು ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ತನ್ನದಾಗಿಸಿಕೊಂಡಿದ್ದಾರೆ. ಕನ್ನಡ ಅಲ್ಲದೆ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲೂ ರಶ್ಮಿಕಾ ಬ್ಯುಸಿಯಾಗಿದ್ದಾರೆ.

Rashmika Mandanna - All Results

 

ನೇರ ಪ್ರಸಾರ

    Top Stories

    //