ಹೋಮ್ » Pro Kabaddi League
Pro Kabaddi League

Latest News on Pro Kabaddi League

ಡಿಸೆಂಬರ್ 22ರಂದು Pro Kabaddi League ಎಂಟನೇ ಆವೃತ್ತಿ ಬೆಂಗಳೂರಿನಲ್ಲಿ ಆರಂಭವಾಗಲಿದೆ. ವೈಟ್​ಫೀಲ್ಡ್​ನ ಶೆರಟಾನ್ ಗ್ರ್ಯಾಂಡ್ ಹೋಟೆಲ್​ನ ಒಳಾಂಗಣದಲ್ಲಿ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಎಲ್ಲಾ ಪಂದ್ಯಗಳು ನಡೆಯಲಿವೆ. ಸ್ಟಾರ್ ಸ್ಪೋರ್ಟ್ ನೆಟ್ವರ್ಕ್​ನ ವಾಹಿನಿಗಳಲ್ಲಿ ನೇರ ಪ್ರಸಾರ ಇರುತ್ತದೆ. ಈ ಪಂದ್ಯಾವಳಿ ಎರಡು ಹಂತದಲ್ಲಿ ನಡೆಯಲಿದ್ದು, ಒಟ್ಟು 12 ತಂಡಗಳು ತಲಾ 22 ಪಂದ್ಯಗಳನ್ನ ಆಡಲಿವೆ. ಎರಡೂ ಹಂತಗಳು ಸೇರಿ 130ಕ್ಕಿಂತ ಹೆಚ್ಚು ಪಂದ್ಯಗಳು ನಡೆಯಲಿವೆ. Bengaluru Bulls ಈಗಾಗಲೇ ಒಂದು ಸಲ ಚಾಂಪಿಯನ್ ಆಗಿದ್ದರಿಂದ ಕ್ರೀಡಾ ಪ್ರೇಮಿಗಳ ಹಾಟ್ ಫೇವರಿಟ್ ತಂಡವಾಗಿದೆ. ಈ ಬಾರಿ ರೇಡಿಂಗ್ ವಿಭಾಗ ಹಿಂದಿನ ಸೀಸನ್ ಗೆ ಹೋಲಿಸಿದ್ರೆ ಹೆಚ್ಚು ಬಲಿಷ್ಠವಾಗಿದೆ. ಬೆಂಗಳೂರು ಬುಲ್ಸ್ ಮತ್ತೊಮ್ಮೆ ಗೆಲ್ಲಲು ಎಲ್ಲಾ ರೀತಿ ಸಜ್ಜಾಗಿದೆ. ಕೋವಿಡ್ ಕರಿ ನೆರಳಿನಿಂದ ನಿಧಾನಕ್ಕೆ ಜಗತ್ತು ಹೊರಬರಲು ತವಕಿಸುತ್ತಿರುವಾಗ ಎಲ್ಲಾ ನಿಯಮಗಳೊಂದಿಗೇ ಪಂದ್ಯಾವಳಿ ನಡೆಯಲಿದೆ. ಯಾರು ಗೆಲ್ಲುತ್ತಾರೆ ಎನ್ನುವುದರ ಜೊತೆಗೆ ಪಂದ್ಯಾವಳಿಯ ಪ್ರತೀ ಹಂತದ ಪ್ರತೀ ಆಟವೂ ರೋಚಕವಾಗಿಯೇ ಇರುತ್ತದೆ. ಡಿಸೆಂಬರ್ 22ರಿಂದ ಜನವರಿ 20ರವರೆಗೆ ಮೊದಲ ಹಂತದ ಪಂದ್ಯಗಳು ನಡೆಯಲಿವೆ. ಅದಾದ ಬಳಿಕ ಎರಡನೇ ಹಂತದ ಪಂದ್ಯಗಳು ನಡೆಯಲಿವೆ.

Pro Kabaddi League - All Results

 

Standings

Teams P W L T PTS

Top Stories

//