ಕರ್ನಾಟಕ ವಿಧಾನಸಭಾ ಚುನಾವನೆಗೆ ಇನ್ನೇನು ದಿನಗಣನೆ ಆರಂಭವಾಗಿದೆ. ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಇದೇ ವೇಳೆ ಅಭ್ಯರ್ಥಿಯೋರ್ವರು ವಿಶಿಷ್ಟ ರೀತಿಯಲ್ಲಿ ನಾಪತ್ರ ಸಲ್ಲಿಸಿ ಗಮನ ಸೆಳೆದಿದ್ದಾರೆ. (ಸಾಂದರ್ಭಿಕ ಚಿತ್ರ)
2/ 7
ಒಂದು ರೂಪಾಯಿಯ 10 ಸಾವಿರ ನಾಣ್ಯವನ್ನು ಠೇವಣಿ ಹಣವನ್ನಾಗಿ ನೀಡಿ ಪಕ್ಷೇತರ ಅಭ್ಯರ್ಥಿಯೋರ್ವರು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ನಾಮಪತ್ರ ಸಲ್ಲಿಸುವಾಗಲೇ ಸುದ್ದಿಯಾಗಿದ್ದಾರೆ.
3/ 7
ಯಾದಗಿರಿಯ ರಾಮಸಮುದ್ರ ಗ್ರಾಮದ ಯೆಂಕಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಯೆಂಕಪ್ಪ ಅವರು ಯಾದಗಿರಿ ತಹಶಿಲ್ದಾರ ಕಚೇರಿಯಲ್ಲಿ ಚುನಾವಣೆ ಅಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.
4/ 7
ಯೆಂಕಪ್ಪ ಅವರು ಭಿಕ್ಷೆ ಬೇಡಿದ ಹಣ ಸಂಗ್ರಹಿಸಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಸಾರ್ವಜನಿಕರ ಬಳಿ ಭಿಕ್ಷೆ ಬೇಡಿ ಒಂದು ರೂ. ಗಳ 10 ಸಾವಿರ ರೂಪಾಯಿ ನಾಣ್ಯಗಳನ್ನು ಭಿಕ್ಷೆ ಬೇಡುವ ಮೂಲಕ ಯೆಂಕಪ್ಪ ಸಂಗ್ರಹಿಸಿದ್ದಾರೆ.
5/ 7
ನಾಮಪತ್ರ ಸಲ್ಲಿಸುವಿಕೆಗಾಗಿ ಠೇವಣಿ ಹಣ ಪಾವತಿ ಮಾಡಲು 10 ಸಾವಿರ ನಾಣ್ಯದೊಂದಿಗೆ ಯೆಂಕಪ್ಪ ಆಗಮಿಸಿದ್ದಾರೆ. ಯೆಂಕಪ್ಪ ಅವರು ಸಮಾನತೆಯ ರಥಯಾತ್ರೆ ಮೂಲಕ ಯಾದಗಿರಿ ವಿಧಾನಸಭೆ ಕ್ಷೇತ್ರದಾದ್ಯಂತ ಸಂಚರಿಸಿದ್ದಾರೆ. ರಥಯಾತ್ರೆ ಮೂಲಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಹಣ ಸಂಗ್ರಹಿಸಿದ್ದಾರೆ.
6/ 7
ಕಳೆದ ಒಂದು ವರ್ಷದಿಂದ ರಥಯಾತ್ರೆ ನಡೆಸಿದ ಯೆಂಕಪ್ಪ ಅವರು ಈ ವೇಳೆ 118 ಹಳ್ಳಿಗಳಿಗೆ ಸಂಚರಿಸಿ ಹಣ ಸಂಗ್ರಹಿಸಿದ್ದಾರೆ. ಮತ ನೀಡಿ ನಾನು ನಿಮಗೆ ಬಡತನದಿಂದ ಸ್ವಾತಂತ್ರ್ಯ ಕೊಡಿಸುವೆ ಎಂಬ ಘೋಷಣೆ ವಾಕ್ಯದೊಂದಿಗೆ ಯೆಂಕಪ್ಪ ಅವರು ಭಿಕ್ಷೆ ಬೇಡಿ ಹಣ ಸಂಗ್ರಹಿಸಿದ್ದಾರೆ.
7/ 7
ಆದರೆ ಯೆಂಕಪ್ಪ ಅವರು 10 ಸಾವಿರ ನಾಣ್ಯಗಳ ಮೂಲಕ ನಾಮಪತ್ರ ಸಲ್ಲಿಸಿರುವುದು ಚುನಾವಣೆ ಸಿಬ್ಬಂದಿಗಳಿಗೆ ತಲೆನೋವು ತಂದಿದೆ. ಚುನಾವಣಾ ಸಿಬ್ಬಂದಿ ನಾಣ್ಯ ಎಣಿಕೆಗೆ ಹರಸಾಹಸ ಪಟ್ಟಿದ್ದು, ನಾಣ್ಯ ಎಣಿಕೆ ಮಾಡಲು ಬರೋಬ್ಬರಿ ಎರಡು ಗಂಟೆ ಬೇಕಾಗಿದೆ.
First published:
17
Yadgir Viral News: 1 ವರ್ಷ ಭಿಕ್ಷೆ ಬೇಡಿದ ಹಣದಲ್ಲಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ!