Good News: ಯುಗಾದಿ ಹಬ್ಬಕ್ಕೆ ವಿಶೇಷ ಬಸ್, ಭರ್ಜರಿ ಕೊಡುಗೆ ಘೋಷಣೆ

ಕನಿಷ್ಠ 45 ರಿಂದ 55 ಜನ ಪ್ರಯಾಣಿಕರು ಲಭ್ಯವಾದಲ್ಲಿ ದಾರಿ ಮಧ್ಯೆ ಸಿಗುವ ಯಾತ್ರಾ ಸ್ಥಳಗಳ ದರ್ಶನ ಮಾಡಿಸಲಾಗುತ್ತದೆ. ಹಲವು ಅನ್ನ ಸಂತರ್ಪಣೆ ಸ್ಥಳಗಳಲ್ಲಿ ಊಟಕ್ಕಾಗಿ ಕಾಲಾವಕಾಶ ಕೊಡಲಾಗುತ್ತದೆ

First published:

  • 17

    Good News: ಯುಗಾದಿ ಹಬ್ಬಕ್ಕೆ ವಿಶೇಷ ಬಸ್, ಭರ್ಜರಿ ಕೊಡುಗೆ ಘೋಷಣೆ

    ಯುಗಾದಿ ಹಬ್ಬದ (Yugadi) ಅಂಗವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಯಾತ್ರಾರ್ಥಿಗಳಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಲು ಮಹತ್ವದ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Good News: ಯುಗಾದಿ ಹಬ್ಬಕ್ಕೆ ವಿಶೇಷ ಬಸ್, ಭರ್ಜರಿ ಕೊಡುಗೆ ಘೋಷಣೆ

    ಮಾರ್ಚ್ 15 ರಿಂದ 25ರವರೆಗೆ ಶ್ರೀಶೈಲದಲ್ಲಿ ಜರುಗುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಗೆ ವಿಶೇಷ ಸಾರಿಗೆ ವ್ಯವಸ್ಥೆ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Good News: ಯುಗಾದಿ ಹಬ್ಬಕ್ಕೆ ವಿಶೇಷ ಬಸ್, ಭರ್ಜರಿ ಕೊಡುಗೆ ಘೋಷಣೆ

    ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟೆ, ಬಸವನ ಬಾಗೇವಾಡಿ ಘಟಕ ಕೇಂದ್ರ ಸ್ಥಾನಗಳಿಂದ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುತ್ತದೆ. ಪ್ರಯಾಣಿಕರಿಗೆ ವಿಜಯಪುರ ಕೇಂದ್ರ ಬಸ್ ನಿಲ್ದಾಣ ಹಾಗೂ ಎಲ್ಲ ಘಟಕಗಳ ಬಸ್ ನಿಲ್ದಾಣಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Good News: ಯುಗಾದಿ ಹಬ್ಬಕ್ಕೆ ವಿಶೇಷ ಬಸ್, ಭರ್ಜರಿ ಕೊಡುಗೆ ಘೋಷಣೆ

    ಒಂದೇ ಗುಂಪಿನಿಂದ ಪ್ರಯಾಣಿಸಲು ಕನಿಷ್ಠ 45 ರಿಂದ 55 ಜನ ಪ್ರಯಾಣಿಕರು ಲಭ್ಯವಾದಲ್ಲಿ ದಾರಿ ಮಧ್ಯೆ ಸಿಗುವ ಯಾತ್ರಾ ಸ್ಥಳಗಳ ದರ್ಶನ ಮಾಡಿಸಲಾಗುತ್ತದೆ. ಹಲವು ಅನ್ನ ಸಂತರ್ಪಣೆ ಸ್ಥಳಗಳಲ್ಲಿ ಊಟಕ್ಕಾಗಿ ಕಾಲಾವಕಾಶ ಕೊಡಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Good News: ಯುಗಾದಿ ಹಬ್ಬಕ್ಕೆ ವಿಶೇಷ ಬಸ್, ಭರ್ಜರಿ ಕೊಡುಗೆ ಘೋಷಣೆ

    ಘಟಕ ಕೇಂದ್ರ ಸ್ಥಾನದಿಂದ ಹೆಚ್ಚುವರಿ ಬಸ್ಸುಗಳಲ್ಲದೇ ಪ್ರಯಾಣಿಕರು ಇಚ್ಛಿಸಿದಲ್ಲಿ ಅವರ ಸ್ವಗ್ರಾಮಗಳಿಂದ ನೇರವಾಗಿ ಶ್ರೀಶೈಲಕ್ಕೆ ಸಾರಿಗೆ ವ್ಯವಸ್ಥೆ ಒದಗಿಸಲು ತೀರ್ಮಾನಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Good News: ಯುಗಾದಿ ಹಬ್ಬಕ್ಕೆ ವಿಶೇಷ ಬಸ್, ಭರ್ಜರಿ ಕೊಡುಗೆ ಘೋಷಣೆ

    ಪ್ರಯಾಣಿಕರು ಮಂತ್ರಾಲಯ ಹಾಗೂ ಮಹಾನಂದಿ ದರ್ಶನ ಮಾಡಲು ಇಚ್ಚಿಸಿದಲ್ಲಿ ಈ ಸ್ಥಳಗಳಿಗೆ ತಗಲುವ ಪ್ರಯಾಣ ದರವನ್ನು ಪಾವತಿಸಿ ಮಂತ್ರಾಲಯ ಹಾಗೂ ಮಹಾನಂದಿಗೆ ಬಸ್ ಸೇವೆ ನೀಡಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Good News: ಯುಗಾದಿ ಹಬ್ಬಕ್ಕೆ ವಿಶೇಷ ಬಸ್, ಭರ್ಜರಿ ಕೊಡುಗೆ ಘೋಷಣೆ

    ಪ್ರಯಾಣಿಕರು ಸಾರಿಗೆ ಸೌಲಭ್ಯ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಮೊ: 7760992251, ಘಟಕ ವ್ಯವಸ್ಥಾಪಕರು ವಿಜಯಪುರ ಘಟಕ-1 ಮೊ: 7760992263, ವಿಜಯಪುರ ಘಟಕ-2 ಮೊ: 7760992264, ಇಂಡಿ ಘಟಕ ವ್ಯವಸ್ಥಾಪಕರ ಮೊ: 7760992265, ಸಿಂದಗಿ ಘಟಕ ವ್ಯವಸ್ಥಾಪಕರ ಮೊ: 7760992266, ಮುದ್ದೇಬಿಹಾಳ ಘಟಕ ವ್ಯವಸ್ಥಾಪಕರ ಮೊ: 7760992267, ತಾಳಿಕೋಟೆ ಘಟಕ ವ್ಯವಸ್ಥಾಪಕರ ಮೊ: 7760992268, ಬಸವನ ಬಾಗೇವಾಡಿ ಘಟಕ ವ್ಯವಸ್ಥಾಪಕರ ಮೊ: 7760998869, ವಿಜಯಪುರ ಕೇಂದ್ರ ಬಸ್ ನಿಲ್ದಾಣ ನಿಲ್ದಾಣಾಧಿಕಾರಿ ಮೊ: 7760992258 ಹಾಗೂ ಕೇಂದ್ರ ಬಸ್ ನಿಲ್ದಾಣ ವಿಜಯಪುರ ದೂ: 08352-251344 ಸಂಸ್ಥೆಯ ಅಧಿಕಾರಿಗಳ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES