Drinking Water: ಕುಡಿಯುವ ನೀರಿನ ಬಳಕೆ ಕುರಿತು ಮಹತ್ವದ ಆದೇಶ

ಕುಡಿಯುವ ನೀರಿನ ಸಮರ್ಪಕ ಪೂರೈಕೆಗಾಗಿ ವಿಜಯಪುರ ಜಿಲ್ಲಾಡಳಿತ ಕೆಲವು ಕ್ರಮಗಳಿಗೆ ಮುಂದಾಗಿದೆ.

First published:

  • 17

    Drinking Water: ಕುಡಿಯುವ ನೀರಿನ ಬಳಕೆ ಕುರಿತು ಮಹತ್ವದ ಆದೇಶ

    ವಿಜಯಪುರ ಜಿಲ್ಲೆಯಲ್ಲಿ ಬೇಸಿಗೆ ಆರಂಭವಾಗುವ ಮುನ್ನವೇ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಎಲ್ಲೆಡೆ ಹಾಹಾಕಾರ ಉಂಟಾಗುತ್ತದೆ. ಅದನ್ನ ತಪ್ಪಿಸಲೆಂದೇ ಜಿಲ್ಲಾಡಳಿತ ನೂತನ ಆದೇಶ ಹೊರಡಿಸಿದ್ದು, ಕೃಷಿ ಚಟುವಟಿಕೆಗೆ ನೀರು ಬಳಸದಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಾಕೀತು ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Drinking Water: ಕುಡಿಯುವ ನೀರಿನ ಬಳಕೆ ಕುರಿತು ಮಹತ್ವದ ಆದೇಶ

    ಬೀರು ಬೇಸಿಗೆ ಈಗಾಗಲೇ ಆರಂಭವಾದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಜಲ ಮೂಲಗಳಲ್ಲಿರುವ ನೀರನ್ನು ಜನ, ಜಾನುವಾರುಗಳ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಬೇಕಾಗಿರುವುದರಿಂದ ಬೇರೆ ಉದ್ದೇಶಗಳಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಕುಡಿಯುವ ನೀರು ಬಳಕೆ ಮಾಡುವುದನ್ನು ನಿಷೇಧಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Drinking Water: ಕುಡಿಯುವ ನೀರಿನ ಬಳಕೆ ಕುರಿತು ಮಹತ್ವದ ಆದೇಶ

    ಕೆರೆ, ಶೇಖರಣಾ ಜಲಾಶಯಗಳ ಗೇಟ್​ಗಳಿಂದ ನೀರು ಸೋರಿಕೆಯನ್ನು ತಡೆಗಟ್ಟುವ ಕುರಿತು ಅವಶ್ಯ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ, ರೈತರು ಕೃಷಿ ಚಟುವಟಿಕೆಗೆ ನೀರು ಬಳಸದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Drinking Water: ಕುಡಿಯುವ ನೀರಿನ ಬಳಕೆ ಕುರಿತು ಮಹತ್ವದ ಆದೇಶ

    ವಿದ್ಯುತ್ ಮೋಟಾರ್ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದು ಹಾಗೂ ಕಡಿತಗೊಳಿಸಿರುವ ವಿದ್ಯುತ್ ಸಂಪರ್ಕ ಮರು ಜೋಡಣೆಯಾಗದಂತೆ ಮತ್ತು ಡಿಸೇಲ್ ಪಂಪಸೆಟ್ಗಳನ್ನು ಬಳಸದಂತೆ ನಿರಂತರವಾಗಿ ಬೇಸಿಗೆ ಮುಗಿಯುವರೆಗೆ ನಿಗಾ ವಹಿಸುವುದು ಜಿಲ್ಲಾಡಳಿತದ ಪ್ರಮುಖ ಉದ್ಧೇಶವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Drinking Water: ಕುಡಿಯುವ ನೀರಿನ ಬಳಕೆ ಕುರಿತು ಮಹತ್ವದ ಆದೇಶ

    ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳಿಗೆ ಮತ್ತು ನಗರ ಹಾಗೂ ಪಟ್ಟಣ ಪಂಚಾಯತಿಗಳಿಗೆ ಕುಡಿಯುವ ನೀರನ್ನು ಪೂರೈಸುವ ಕುರಿತು ಯಾವುದೇ ರೀತಿಯ ವಿದ್ಯುತ್ನ ತೊಂದರೆಯಾಗದಂತೆ ಹೆಸ್ಕಾಂ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Drinking Water: ಕುಡಿಯುವ ನೀರಿನ ಬಳಕೆ ಕುರಿತು ಮಹತ್ವದ ಆದೇಶ

    ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಹಿಸಿಕೊಟ್ಟ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತಿರುವ ಕುರಿತು ಮೇಲಾಧಿಕಾರಿಗಳು ಮೇಲಿಂದ ಮೇಲೆ ಪರಿಶೀಲಿಸಿ ಸಲಹೆ ಸೂಚನೆ ನೀಡಬೇಕೆಂದು ಅಧಿಕಾರಿಗೆ ಸೂಚನೆ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Drinking Water: ಕುಡಿಯುವ ನೀರಿನ ಬಳಕೆ ಕುರಿತು ಮಹತ್ವದ ಆದೇಶ

    ಪರಸ್ಪರ ಸಹಕಾರ ಸಮನ್ವಯತೆಯಿಂದ ಜವಾಬ್ದಾರಿಯುತವಾಗಿ ಜಿಲ್ಲೆಯ ಎಲ್ಲ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರನ್ವಯ ಅಂತಹವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಆದೇಶ ಹೊರಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES