Uttara Karnataka Rain Alert: ಗಮನಿಸಿ, ಈ ಜಿಲ್ಲೆಗಳಲ್ಲಿ ಇಂದೇ ಆಲಿಕಲ್ಲು ಮಳೆ ಸಾಧ್ಯತೆ

ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮುಂದಿನ ಒಂದರಿಂದ ಎರಡು ದಿನಗಳಲ್ಲಿ ಆಲಿಕಲ್ಲು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

First published:

  • 17

    Uttara Karnataka Rain Alert: ಗಮನಿಸಿ, ಈ ಜಿಲ್ಲೆಗಳಲ್ಲಿ ಇಂದೇ ಆಲಿಕಲ್ಲು ಮಳೆ ಸಾಧ್ಯತೆ

    ಕರ್ನಾಟಕದ ಹಲವು ಭಾಗಗಳಲ್ಲಿ ಈಗ ಮಳೆಯಾಗುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡುತ್ತಲೇ ಇದೆ. ಇದೇ ವೇಳೆ, ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ಕುರಿತು ಪ್ರಮುಖ ಮಾಹಿತಿ ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Uttara Karnataka Rain Alert: ಗಮನಿಸಿ, ಈ ಜಿಲ್ಲೆಗಳಲ್ಲಿ ಇಂದೇ ಆಲಿಕಲ್ಲು ಮಳೆ ಸಾಧ್ಯತೆ

    ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮುಂದಿನ ಒಂದರಿಂದ ಎರಡು ದಿನಗಳಲ್ಲಿ ಆಲಿಕಲ್ಲು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Uttara Karnataka Rain Alert: ಗಮನಿಸಿ, ಈ ಜಿಲ್ಲೆಗಳಲ್ಲಿ ಇಂದೇ ಆಲಿಕಲ್ಲು ಮಳೆ ಸಾಧ್ಯತೆ

    ಕರ್ನಾಟಕದ ವಿಜಯಪುರ, ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಕೆಲವು ಪ್ರದೇಶಗಳಲ್ಲಿ ಆಲಿಕಲ್ಲು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Uttara Karnataka Rain Alert: ಗಮನಿಸಿ, ಈ ಜಿಲ್ಲೆಗಳಲ್ಲಿ ಇಂದೇ ಆಲಿಕಲ್ಲು ಮಳೆ ಸಾಧ್ಯತೆ

    ಹವಾಮಾನ ಇಲಾಖೆಯ ಸೂಚನೆಯ ಪ್ರಕಾರ ವಿಜಯಪುರ, ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ಹಾವೇರಿ, ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Uttara Karnataka Rain Alert: ಗಮನಿಸಿ, ಈ ಜಿಲ್ಲೆಗಳಲ್ಲಿ ಇಂದೇ ಆಲಿಕಲ್ಲು ಮಳೆ ಸಾಧ್ಯತೆ

    ಬಿಸಿಲ ಬೇಗೆಯಿಂದ ಬೆಂದಿದ್ದ ಭೂಮಿಗೆ ಮಳೆರಾಯ ತಂಪೆರಿದ್ದಾನೆ. ಬೇಸಿಗೆಯ ಝಳಕ್ಕೆ ಬೇಸತ್ತಿದ್ದ ಜನರು ಮಳೆ ಸುರಿದು ವಾತಾವರಣ ತಂಪಾದ ಕಾರಣ ಖುಷಿಗೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Uttara Karnataka Rain Alert: ಗಮನಿಸಿ, ಈ ಜಿಲ್ಲೆಗಳಲ್ಲಿ ಇಂದೇ ಆಲಿಕಲ್ಲು ಮಳೆ ಸಾಧ್ಯತೆ

    ಹೌದು, ಏಪ್ರಿಲ್ 12 ರಿಂದ 20 ರವರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಪ್ರಕಟಣೆ ಬಿಡುಗಡೆ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Uttara Karnataka Rain Alert: ಗಮನಿಸಿ, ಈ ಜಿಲ್ಲೆಗಳಲ್ಲಿ ಇಂದೇ ಆಲಿಕಲ್ಲು ಮಳೆ ಸಾಧ್ಯತೆ

    ಇನ್ನು ಮುಂದಿನ ವಾರ ಸಾಧಾರಣ ಮಳೆ ಬೀಳಲಿರುವ ಪ್ರದೇಶಗಳನ್ನು ಗಮನಿಸುವುದಾದರೆ, ಉಡುಪಿ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದ ಮಳೆ ಸುರಿಯಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರದ ಮಧ್ಯಭಾಗ, ಕೊಪ್ಪಳದ ಪೂರ್ವ ಭಾಗ, ರಾಯಚೂರಿನ ದಕ್ಷಿಣ ಭಾಗದ ತಾಲೂಕುಗಳಲ್ಲಿ ತಕ್ಕ ಮಟ್ಟಿನ ಮಳೆ ಸುರಿಯಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES