Vijayapura: ರಂಗೋಲಿ ಬಿಡಿಸಿ, ಬಂಪರ್ ಬಹುಮಾನ ಗೆಲ್ಲಿ!

ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

First published:

  • 17

    Vijayapura: ರಂಗೋಲಿ ಬಿಡಿಸಿ, ಬಂಪರ್ ಬಹುಮಾನ ಗೆಲ್ಲಿ!

    ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ವಿಜಯಪುರ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Vijayapura: ರಂಗೋಲಿ ಬಿಡಿಸಿ, ಬಂಪರ್ ಬಹುಮಾನ ಗೆಲ್ಲಿ!

    ಮಾರ್ಚ್ 22 ರಂದು ವಿಜಯಪುರ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್, ಪುರಸಭೆ ಹಾಗೂ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಮತ್ತು ನಗರ ವ್ಯಾಪ್ತಿ ಸೇರಿದಂತೆ ಜಿಲ್ಲೆಯಾದ್ಯಂತ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಈ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Vijayapura: ರಂಗೋಲಿ ಬಿಡಿಸಿ, ಬಂಪರ್ ಬಹುಮಾನ ಗೆಲ್ಲಿ!

    ವಿಜಯಪುರ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಯೋಜಿಸುವ ಹಾಗೂ ಪುರಸಭೆ ಹಾಗೂ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿಜೇತರಿಗೆ ಭರ್ಜರಿ ಬಹುಮಾನ ಘೋಷಿಸಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Vijayapura: ರಂಗೋಲಿ ಬಿಡಿಸಿ, ಬಂಪರ್ ಬಹುಮಾನ ಗೆಲ್ಲಿ!

    ಮೊದಲ ಸ್ಥಾನ ಪಡೆದವರಿಗೆ 1500 ರೂ., ದ್ವಿತೀಯ ಸ್ಥಾನ ಪಡೆದವರಿಗೆ 1000 ರೂ. ಹಾಗೂ ತೃತೀಯ ಸ್ಥಾನ ವಿಜೇತರಿಗೆ 500 ರೂ.ಬಹುಮಾನ ಘೋಷಣೆ ಮಾಡಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Vijayapura: ರಂಗೋಲಿ ಬಿಡಿಸಿ, ಬಂಪರ್ ಬಹುಮಾನ ಗೆಲ್ಲಿ!

    ವಿಜಯಪುರ ನಗರ ಪ್ರದೇಶದ ವ್ಯಾಪ್ತಿಯ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಪ್ರಥಮ 3000 ರೂ., ದ್ವಿತೀಯ 2000 ಹಾಗೂ ತೃತೀಯ 1000 ರೂ.ಬಹುಮಾನ ನೀಡಲಾಗುವುದು.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Vijayapura: ರಂಗೋಲಿ ಬಿಡಿಸಿ, ಬಂಪರ್ ಬಹುಮಾನ ಗೆಲ್ಲಿ!

    ಪ್ರತಿ ಸ್ಪರ್ಧಿಗಳು 5/5 ಅಡಿ ವಿಸ್ತೀರ್ಣದ ರಂಗೋಲಿ ಬಿಡಿಸಬೇಕು.ರಂಗೋಲಿಯು ಮತದಾನಕ್ಕೆ ಜಾಗೃತಿ ಮೂಡಿಸುವಂತಿರಬೇಕು ಎಂಬ ನಿಯಮ ಹಾಕಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Vijayapura: ರಂಗೋಲಿ ಬಿಡಿಸಿ, ಬಂಪರ್ ಬಹುಮಾನ ಗೆಲ್ಲಿ!

    ರಂಗೋಲಿಯಲ್ಲಿ ಯಾವುದೇ ರಾಜಕೀಯ ಚಿನ್ಹೆ ಮತ್ತು ವ್ಯಕ್ತಿಗಳ ಭಾವಚಿತ್ರಗಳನ್ನು ಬಿಡಿಸುವಂತಿಲ್ಲ ಎಂಬ ನಿಯಮಗಳನ್ನು ಈ ಸ್ಪರ್ಧೆಯಲ್ಲಿ ರೂಪಿಸಲಾಗಿದೆ.  ಒಟ್ಟಾರೆ ರಂಗೋಲಿ ಬಿಡಿಸುವ ಮೂಲಕ ಭರ್ಜರಿ ಬಹುಮಾನ ಗೆಲ್ಲುವ ಸುವರ್ಣಾವಕಾಶ ವಿಜಯಪುರ ಜಿಲ್ಲೆಯ ಸಾರ್ವಜನಿಕರಿಗೆ ಒದಗಿಬಂದಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES