ಹೊಟ್ಟೆಯಲ್ಲಿ ನಾಣ್ಯ ಪತ್ತೆಯಾಗುವ ಘಟನೆಗಳ ಬಗ್ಗೆ ಕೇಳಿರುತ್ತೀರಿ, ಆದ್ರೆ ಹೊಟ್ಟೆಯಲ್ಲಿ 187 ಕಾಯಿನ್ಗಳು ಪತ್ತೆಯಾಗಿವೆ ಅಂದ್ರೆ ನಂಬಲು ಸಾಧ್ಯವೇ!? ಆದ್ರೆ ನಂಬಲೇಬೇಕು, ಅಂತಹ ಘಟನೆಯೊಂದು ನಮ್ಮ ಬಾಗಲಕೋಟೆಯಲ್ಲಿ ನಡೆದಿದೆ. 58 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 187 ನಾಣ್ಯಗಳನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಎಂಡೋಸ್ಕೋಪಿ ಮೂಲಕ ಬಾಗಲಕೋಟೆಯ HSK ಆಸ್ಪತ್ರೆ ವೈದ್ಯರು ವ್ಯಕ್ತಿಯ ಹೊಟ್ಟೆಯಿಂದ 187 ನಾಣ್ಯಗಳನ್ನು ಹೊರಕ್ಕೆ ತೆಗೆದಿದ್ದಾರೆ. 5 ರೂಪಾಯಿಯ 56 ನಾಣ್ಯ, 2 ರೂಪಾಯಿಯ 51 ನಾಣ್ಯ ಹಾಗೂ 1 ರೂಪಾಯಿಯ 80 ನಾಣ್ಯಗಳು ಸೇರಿ ಒಟ್ಟು 187 ನಾಣ್ಯಗಳು ವ್ಯಕ್ತಿಯ ಹೊಟ್ಟೆಯಲ್ಲಿ ಪತ್ತೆಯಾಗಿದೆ. ವೈದ್ಯರಾದ ಡಾ. ಈಶ್ವರ ಕಲಬುರಗಿ, ಡಾ. ಪ್ರಕಾಶ ಕಟ್ಟಿಮನಿ, ಅರವಳಿಕೆ ತಜ್ಞರಾದ ಡಾ. ಅರ್ಚನಾ, ಡಾ.ರೂಪಾ ಹುಲಕುಂದೆ ಅವರ ತಂಡವು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಹೊಟ್ಟೆಯಲ್ಲಿ ಇಷ್ಟೊಂದು ನಾಣ್ಯಗಳು ಪತ್ತೆಯಾದ ಕಾರಣ ತಿಳಿದುಬಂದಿಲ್ಲ. ಯಾವ ಕಾರಣಕ್ಕೆ ಇಷ್ಟು ಕಾಯಿನ್ಗಳನ್ನು ನುಂಗಿದ್ದ ಎಂಬುದು ನಿಗೂಢವಾಗಿದೆ. ಒಟ್ಟಾರೆ 187 ನಾಣ್ಯಗಳನ್ನು ಹೊಟ್ಟೆಯಿಂದ ಹೊರತೆಗೆದ ವೈದ್ಯರ ತಂಡ ಪ್ರಶಂಸೆಗೆ ಪಾತ್ರವಾಗಿದೆ. ದೇಶ ವಿದೇಶಗಳಲ್ಲಿ ಇಂತಹ ಅಚ್ಚರಿಯ ಘಟನೆ ನಡೆಯುವುದು ವರದಿಯಾಗುತ್ತಿದ್ದು ಇದೀಗ ಬಾಗಲಕೋಟೆಯಲ್ಲೇ ನಡೆದಿರುವುದು ಅಚ್ಚರಿ ಮೂಡಿಸಿದೆ.