ಕಾಡುಪಾಪಗಳಿಗೆ ಸ್ಥಳೀಯವಾಗಿ ʼಕಾಡುಮನುಷ್ಯʼ ಎಂದೂ ಕರೆಯುತ್ತಾರೆ. ಇದರ ಮಾಂಸವನ್ನು ಔಷಧಿಗೆ ಬರುತ್ತದೆ ಎಂದು ಕೆಲವರು ನಂಬಿದ್ದಾರೆ. ಆದರೆ ಇದರ ಮಾಂಸವು ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಸ್ನೇಕ್ ಪವನ್ ತಿಳಿಸುತ್ತಾರೆ. ಒಟ್ಟಿನಲ್ಲಿ ಕಾಡುಪಾಪ ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿದ್ದು, ಇದನ್ನು ರಕ್ಷಿಸುವ ಹೊಣೆ ನಮ್ಮೆಲ್ಲರದ್ದೂ ಆಗಿದೆ.