ಇಡಗುಂಜಿ ಗಣಪತಿಯು ಭಕ್ತರಲ್ಲಿ ಮಹತೋಭಾರ ವಿನಾಯಕ ದೇವರು ಎಂದು ಪ್ರಸಿದ್ಧಿ. ಸುಮಾರು 1500 ಕ್ಕೂ ಹೆಚ್ಚು ವರ್ಷಗಳ ಹಿಂದಿನ ದೇಗುಲವಿದು ಎಂದು ಹೇಳಲಾಗುತ್ತದೆ. ಅಲ್ಲದೇ, ಸ್ಕಂದ ಪುರಾಣದಲ್ಲಿಯೂ ಇಡಗುಂಜಿ ಕ್ಷೇತ್ರದ ಉಲ್ಲೇಖವಿದೆಯಂತೆ. ತ್ರೇತಾಯುಗದಲ್ಲಿ ನಾರದರಿಂದ ಪ್ರತಿಷ್ಠಾಪಿಸಲ್ಪಟ್ಟ ದೇವಸ್ಥಾನವಿದು ಎಂಬ ನಂಬಿಕೆಯಿದೆ. ಇಲ್ಲಿಯೇ ನಾರದರು ವಟು ರೂಪಿ ಬಾಲ ಗಣಪನನ್ನು ಪ್ರತಿಷ್ಠಾಪಿಸಿ ಸಂಕಷ್ಟನಾಶಕ ಗಣೇಶ ಸ್ತೋತ್ರ ಬರೆದಿದ ಕುರಿತು ನಾರದ ಫುರಾಣದಲ್ಲಿದೆ ಉಲ್ಲೇಖವಿದೆ ಎಂದು ಭಕ್ತರು ಹೇಳುತ್ತಾರೆ.