ಈ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ಟ ಮತ್ತು ಅನಂತ ಹೆಗಡೆ ದಂತಳಿಗೆ, ಮೃದಂಗ ವಾದಕರಾಗಿ ಎ.ಪಿ ಪಾಟಕ, ನರಸಿಂಹ ಭಟ್ ಹಂಡ್ರಮನೆ ಇರಲಿದ್ದಾರೆ. ಇನ್ನು ಮುಮ್ಮೇಳದಲ್ಲಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ, ವಾಸುದೇವರಂಗಾ ಭಟ್ಟ, ವಿದ್ವಾನ್ ಗಣಪತಿ ಭಟ್ಟ ಸಂಕದಗುಂಡಿ, ಡಾ ಮಹೇಶ್ ಭಟ್ಟ ಇಡಗುಂದಿ ಮತ್ತು ವಿದ್ವಾನ್ ವಿನಾಯಕ ಭಟ್ಟ ಇರಲಿದ್ದಾರೆ.(ಸಾಂದರ್ಭಿಕ ಚಿತ್ರ)
ದೇವುಡು ಅವರ ಅಪಾರ ಶಬ್ದಸಂಪತ್ತನ್ನು ಯಕ್ಷಗಾನ ಪ್ರಸಂಗಕ್ಕಿಳಿಸುವುದು ಸುಲಭವೇನೂ ಆಗಿರಲಿಲ್ಲ. ಹೀಗಾಗಿ ಸುಮಾರು ಐದಾರು ತಿಂಗಳ ಸತತ ಪ್ರಯತ್ನದಿಂದ ಈ ಪ್ರಸಂಗ ರಚನೆಯಾಯಿತು ಎಂದು ಅನಂತ ಹೆಗಡೆ ದಂತಳಿಗೆ ತಿಳಿಸಿದರು. ಆಸಕ್ತರು ಈ ಯಕ್ಷಗಾನ ಪ್ರಸಂಗ ಹಮ್ಮಿಕೊಳ್ಳಬಯಸಿದ್ದಲ್ಲಿ ಅನಂತ ಹೆಗಡೆ ದಂತಳಿಗೆ ಅವರ ಸಂಪರ್ಕ ಸಂಖ್ಯೆ ಹೀಗಿದೆ: 9483069685 (ಸಾಂದರ್ಭಿಕ ಚಿತ್ರ)