Ruturaj Gaikwad Wins Orange Cap| ಅಬ್ಬರದ ಬ್ಯಾಟಿಂಗ್, ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ ಗಾಯಕ್ವಾಡ್!
IPL 2021: ಈ ಋತುವಿನಲ್ಲಿ ಗಾಯಕ್ವಾಡ್ 64 ಬೌಂಡರಿಗಳನ್ನು ಹೊಡೆದಿದ್ದಾರೆ. 23 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ರಾಹುಲ್ ನಂತರದ ಸ್ಥಾನದಲ್ಲಿದ್ದರೆ, ಬೌಂಡರಿ ಸಿಡಿಸಿದವರ ಪಟ್ಟಿಯಲ್ಲಿ ಗಾಯಕ್ವಾಡ್ ಅಗ್ರಸ್ಥಾನದಲ್ಲಿದ್ದಾರೆ.
ಋತುರಾಜ್ ಗಾಯಕ್ವಾಡ್ ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಕೇವಲ 24 ವರ್ಷ ಮತ್ತು 257 ದಿನಗಳಲ್ಲಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ ಈ ದಾಖಲೆ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಹೆಸರಿನಲ್ಲಿತ್ತು.
2/ 7
ಋತುರಾಜ್ ಗಾಯಕ್ವಾಡ್ ಕೇವಲ 16 ಇನ್ನಿಂಗ್ಸ್ಗಳಲ್ಲಿ 635 ರನ್ ಗಳಿಸುವ ಮೂಲಕ ಈ ವರ್ಷ ಅತಿಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಫಾಫ್ ಡು ಪ್ಲೆಸಿಸ್ ಸ್ಥಾನ ಪಡೆದಿದ್ದಾರೆ.
3/ 7
ಈ ಋತುವಿನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿರುವ ಗಾಯಕ್ವಾಡ್ 45.35 ಸರಾಸರಿಯಲ್ಲಿ 136.26 ರ ಉತ್ತಮ ಸ್ಟ್ರೈಕ್-ರೇಟ್ ನಲ್ಲಿ ರನ್ ಗಳಿಸಿದ್ದಾರೆ.
4/ 7
ಈ ಋತುವಿನಲ್ಲಿ ಗಾಯಕ್ವಾಡ್ 64 ಬೌಂಡರಿಗಳನ್ನು ಹೊಡೆದಿದ್ದಾರೆ. 23 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ರಾಹುಲ್ ನಂತರದ ಸ್ಥಾನದಲ್ಲಿದ್ದರೆ, ಬೌಂಡರಿ ಸಿಡಿಸಿದವರ ಪಟ್ಟಿಯಲ್ಲಿ ಗಾಯಕ್ವಾಡ್ ಅಗ್ರಸ್ಥಾನದಲ್ಲಿದ್ದಾರೆ.
5/ 7
ಈ ವರ್ಷ ಐಪಿಎಲ್ನಲ್ಲಿ ಒಂದು ಶತಕ ಸಿಡಿಸಿದ್ದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆ ಶತಕ ಬಂದಿತ್ತು.
6/ 7
ಫಾಫ್ ಡುಪ್ಲೆಸಿ ಜೊತೆಗೆ ಉತ್ತಮ ಜೊತೆಯಾಟ ನೀಡಿರುವ ಗಾಯಕ್ವಾಡ್ 16 ಇನ್ನಿಂಗ್ಸ್ಗಳ ಪೈಕಿ ಎರಡು ಇನ್ನಿಂಗ್ಸ್ಗಳಲ್ಲಿ ಔಟಾದೆ ಉಳಿದಿದ್ದರು.
7/ 7
2021 ಐಪಿಎಲ್ನಲ್ಲಿ ಗಾಯಕ್ವಾಡ್ ಒಟ್ಟು 4 ಅರ್ಧಶತಕ ಮತ್ತು 1 ಶತಕ ಬಾರಿಸಿದ್ದಾರೆ. ಭವಿಷ್ಯದಲ್ಲಿ ಇವರು ಭಾರತ ತಂಡದ ಖಾಯಂ ಸದಸ್ಯರಾಗಲಿದ್ದಾರೆ ಎನ್ನಲಾಗಿದೆ.