Udupi: ಮದುವೆ ಆದ್ಮೇಲೆ ಹನಿಮೂನ್ ಅಲ್ಲ, ಸ್ವಚ್ಛ ಭಾರತ ಮಾಡಿದ ದಂಪತಿ!

ಬೈಂದೂರಿನ ಇವರು ಮದುವೆ ಆಗಿ ಕೇವಲ 1 ವಾರವಷ್ಟೇ ಕಳೆದಿತ್ತು. ಮದುವೆಗೂ ಮುನ್ನ ಬರೋಬ್ಬರಿ 6 ವರ್ಷಗಳ ಲವ್ ಸ್ಟೋರಿ ಇವರದ್ದು!

First published:

  • 17

    Udupi: ಮದುವೆ ಆದ್ಮೇಲೆ ಹನಿಮೂನ್ ಅಲ್ಲ, ಸ್ವಚ್ಛ ಭಾರತ ಮಾಡಿದ ದಂಪತಿ!

    ಮದುವೆ ಆದ್ಮೇಲೆ ಏನ್ ಪ್ಲಾನ್? ಎಂಬ ಪ್ರಶ್ನೆ ಬಂದ ತಕ್ಷಣ ಥಟ್ ಅಂತ ಬರೋ ಇನ್ನೊಂದು ಪ್ರಶ್ನೆಯೇ ಹನಿಮೂನ್ ಎಲ್ಲಿಗೆ ಅಂತ. ಆದ್ರೆ ಇಲ್ಲೊಂದು ಜೋಡಿ ಮದುವೆ ಆದ್ಮೇಲೆ ಮಾಡಿದ ವಿಶೇಷ ಕೆಲಸಕ್ಕೆ ಭಾರೀ ಸುದ್ದಿ ಮಾಡಿದ್ದರು. ಯಾರು ಆ ಜೋಡಿ, ಅವರು ಮಾಡಿದ್ದಾದ್ರೂ ಏನು? ಮುಂದೆ ಓದಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Udupi: ಮದುವೆ ಆದ್ಮೇಲೆ ಹನಿಮೂನ್ ಅಲ್ಲ, ಸ್ವಚ್ಛ ಭಾರತ ಮಾಡಿದ ದಂಪತಿ!

    ಈ ಸುಂದರ ಜೋಡಿಯ ಹೆಸರು ಅನುದೀಪ್ ಹೆಗಡೆ ಮತ್ತು ಮಿನುಷಾ ಕಾಂಚನ್ ಅಂತ. ಬೈಂದೂರಿನ ಇವರು ಮದುವೆ ಆಗಿ ಕೇವಲ 1 ವಾರವಷ್ಟೇ ಕಳೆದಿತ್ತು. ಮದುವೆಗೂ ಮುನ್ನ ಬರೋಬ್ಬರಿ 6 ವರ್ಷಗಳ ಲವ್ ಸ್ಟೋರಿ ಇವರದ್ದು!

    MORE
    GALLERIES

  • 37

    Udupi: ಮದುವೆ ಆದ್ಮೇಲೆ ಹನಿಮೂನ್ ಅಲ್ಲ, ಸ್ವಚ್ಛ ಭಾರತ ಮಾಡಿದ ದಂಪತಿ!

    ಇವರು ಮದುವೆಯಾದಾಗ ಕೊರೊನಾದಿಂದ ಎಲ್ಲೂ ಹನಿಮೂನ್​ಗೆ ಹೋಗಾಕಾಗಿರ್ಲಿಲ್ಲ, ಆದ್ರೂ ಏನಾದ್ರೂ ನೆನಪಲ್ಲಿರುವಂಥಾ ಕೆಲಸ ಮಾಡ್ಬೇಕು ಅಂತ ಅಂದ್ಕೊಂಡಿದ್ರು.

    MORE
    GALLERIES

  • 47

    Udupi: ಮದುವೆ ಆದ್ಮೇಲೆ ಹನಿಮೂನ್ ಅಲ್ಲ, ಸ್ವಚ್ಛ ಭಾರತ ಮಾಡಿದ ದಂಪತಿ!

    ಅನುದೀಪ್ ಅವರು ತಮ್ಮ ಮನೆಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಸೋಮೇಶ್ವರ ಬೀಚ್​ಗೆ ಆಗಾಗ ಹೋಗ್ತಿದ್ರು. ಮದುವೆಯಾದ ಹೊಸದರಲ್ಲೂ ಸೋಮೇಶ್ವರ್ ಬೀಚ್ಗೆ ಹೋದಾಗ ಸಮುದ್ರ ದಡ ಬಹಳ ಗಲೀಜಾಗಿರೋದು ಗಮನಕ್ಕೆ ಬಂದಿತ್ತು.

    MORE
    GALLERIES

  • 57

    Udupi: ಮದುವೆ ಆದ್ಮೇಲೆ ಹನಿಮೂನ್ ಅಲ್ಲ, ಸ್ವಚ್ಛ ಭಾರತ ಮಾಡಿದ ದಂಪತಿ!

    ಬೀಚ್​ನಲ್ಲಿ ಚಪ್ಪಲಿಗಳು, ಮದ್ಯದ ಬಾಟಲಿಗಳು ಮತ್ತು ಔಷಧಿ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದುಕೊಂಡಿದ್ದವು. ಸಮುದ್ರ ದಡ ಕಸದ ರಾಶಿಯಿಂದಲೇ ತುಂಬಿಹೋಗಿತ್ತು. ಅನುದೀಪ್ ತಮ್ಮ ಪತ್ನಿ ಮಿನುಷಾ ಅವರಲ್ಲಿ ಈ ಸಮುದ್ರ ತೀರ ಕ್ಲೀನ್ ಮಾಡುವ ಪ್ರಸ್ತಾಪ ಮುಂದಿಟ್ಟರು.

    MORE
    GALLERIES

  • 67

    Udupi: ಮದುವೆ ಆದ್ಮೇಲೆ ಹನಿಮೂನ್ ಅಲ್ಲ, ಸ್ವಚ್ಛ ಭಾರತ ಮಾಡಿದ ದಂಪತಿ!

    ಮಿನುಷಾ ಸಹ ತನ್ನ ಪತಿಯ ಅಭಿಪ್ರಾಯಕ್ಕೆ ತಕ್ಷಣ ಜೈ ಅಂದ್ರು, ಈ ಹೊಸ ದಂಪತಿ ತಮ್ ಪಾಡಿಗೆ ತಾವು ಸೋಮೇಶ್ವರ ಬೀಚ್ ಕ್ಲೀನ್ ಮಾಡೋಕೆ ಶುರು ಮಾಡಿದ್ರು. ನಿಧಾನಕ್ಕೆ ಇವರ ಜೊತೆ ಸ್ಥಳೀಯ ಉತ್ಸಾಹಿಗಳು ಸಹ ಕೈಜೋಡಿಸಿದ್ರು.

    MORE
    GALLERIES

  • 77

    Udupi: ಮದುವೆ ಆದ್ಮೇಲೆ ಹನಿಮೂನ್ ಅಲ್ಲ, ಸ್ವಚ್ಛ ಭಾರತ ಮಾಡಿದ ದಂಪತಿ!

    ನವೆಂಬರ್ 27ರಿಂದ ಡಿಸೆಂಬರ್ 5ರವರೆಗೆ ಈ ದಂಪತಿ ಇಡೀ ಸೋಮೇಶ್ವರ ಸಮುದ್ರ ತೀರದಲ್ಲಿರೋ ಕಸವನ್ನೆಲ್ಲ ಸ್ವಚ್ಛಗೊಳಿಸಿ 6 ಕ್ವಿಂಟಲ್ ಕಸವನ್ನು ಒಟ್ಟುಗೂಡಿಸಿದ್ರು! ಒಟ್ಟಾರೆ ಮದುವೆ ಆದ್ಮೇಲೆ ಮಾಡಿದ ಈ ಸ್ವಚ್ಛತಾ ಕಾರ್ಯ ಈ ದಂಪತಿ ರಾಷ್ಟ್ರಮಟ್ಟದಲ್ಲಿ ಫೇಮಸ್ ಆಗುವಂತೆ ಮಾಡ್ತು.

    MORE
    GALLERIES